News and Updates

ಬಾಹುಬಲಿ ರಾಜ್ಯಾಭಿಷೇಕ ಮಹೋತ್ಸವಕ್ಕೆ ಚಾಲನೆ ನೀಡಿದ ಉಪರಾಷ್ಟ್ರಪತಿ ನಾಯ್ಡು ( Shravanabelagola Mahamastakabhisheka 2018 )

ಹಾಸನ: ಭಗವಾನ್ ಬಾಹುಬಲಿಯ 88ನೇ ಮಹಾಮಸ್ತಕಾಭಿಷೇಕದ ಅಂಗವಾಗಿ ಶ್ರವಣಬೆಳಗೊಳದಲ್ಲಿ ಶನಿವಾರ ನಡೆದ ರಾಜ್ಯಾಭಿಷೇಕ ಮಹೋತ್ಸವಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜ್ಯಪಾಲ ವಜುಭಾಯಿ ವಾಲಾ ಚಾಲನೆ ನೀಡಿದರು.

ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನಡೆದ ರಾಜ್ಯಾಭಿಷೇಕ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಕಲಶದಲ್ಲಿನ ನವರತ್ನಗಳಿಂದ ಬಾಹುಬಲಿ ಮೂರ್ತಿಗೆ ಅಭಿಷೇಕ ಹಾಗೂ ಮೂರ್ತಿಗೆ ಚಾಮರ ಸೇವೆ, ಮಂಗಳಾರತಿಯನ್ನು ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು ನೆರವೇರಿಸಿದರು.

ಬಾಹುಬಲಿಯ ರಜತ ಮೂರ್ತಿಯನ್ನು ಅನಾವರಣ ಮಾಡಿ, ಮೂರ್ತಿಗೆ ಚಿನ್ನದ ಸರ ತೊಡಿಸಿ, ಸ್ವರ್ಣ ಕಲಶದಿಂದ ಗಂಗಾಭಿಷೇಕವನ್ನು ಉಪರಾಷ್ಟ್ರಪತಿಯವರು ನೆರವೇರಿಸಿದರು. ನಂತರ ನೆರೆದಿದ್ದ ಗಣ್ಯರಿಗೆ ತೀರ್ಥವನ್ನು ವಿತರಿಸಲಾಯಿತು.

108 ಜೈನ ಧಾರ್ಮಿಕ ಗ್ರಂಥಗಳ ಪುನರ್‌ಮುದ್ರಿತ ಪ್ರತಿಗಳನ್ನು ವೆಂಕಯ್ಯನಾಯ್ಡು ಬಿಡುಗಡೆ ಮಾಡಿದರು. ದಿಗಂಬರ ಮುನಿಗಳಿಗೆ, ಮಾತಾಜಿಯವರಿಗೆ ಉಪರಾಷ್ಟ್ರಪತಿಯವರು ನಮಿಸಿದರು.
ಚಾವುಂಡರಾಯ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಸಚಿವ ಅನಂತ್ ಕುಮಾರ್, ಸಚಿವ ಎ.ಮಂಜು ಇದ್ದರು.

On the occasion of 88th edition of Mahamastakabhisheka, Rajyabhisheka Mahotsav was performed. Vice President Venkaiah Naidu and Governor Vajubhai Wala inaugurated the festival.

Rajyabhisheka festival that took place under the aegis of Sri Charukeerti Bhattaraka Swamy, included the Abhisheka ceremony to Silver image of Bahubali. Mr. Naidu sought blessing from Tyagis and Mataji.

Sri Venkaiah Naidu later released the reprinted books on Jain religion at Chawundaraya Mantap. Other dignitaries present in the ceremony included Central minister Sri. Ananthakumar and district in charge minister A.Manju.

For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka2018-Official App.
Visit our website : www.mahamastakabhisheka2018.com
Fallow us on Facebook: facebook.com/2018mastakabhisheka/ Daily updates on Mahamastakabhisheka2018, bhahubali, Kalashabooking, events, Lord Gommateshwara, Sharvanabelagola, Hassan.