News and Updates

ಬುದವಾರದಿಂದ ಹೆಲಿರೈಡ್ / Heli Ride from Wednesday ( Shravanabelagola Mahamastakabhisheka 2018 )

ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಪ್ರಯುಕ್ತ, ಬುಧವಾರದಿಂದ ಹೆಲಿರೈಡ್ ಆರಂಭವಾಗಲಿದೆ. ಭಗವದ್ಭಕ್ತರು ಮಸ್ತಕಾಭಿಷೇಕದ ಸಂದರ್ಭದಲ್ಲಿ ಮತ್ತಷ್ಟು ಹತ್ತಿರದಿಂದ ಭಗವಾನ್ ಬಾಹುಬಲಿಯ ದರ್ಶನವಲ್ಲದೆ, ಸುತ್ತಮುತ್ತಲಿನ ದೃಶ್ಯಾವಳಿಯನ್ನು ಸವಿಯಬಹುದಾಗಿದೆ. 8 ನಿಮಿಷಗಳ ಕಾಲ ಹೆಲಿರೈಡ್ ನಡೆಯಲಿದ್ದು, ₹ 2100 ಪಾವತಿಸಿ, ಗೊಮ್ಮಟಗಿರಿಯ ಸುಂದರ ದೃಶ್ಯಗಳನ್ನು ಕಣ್ಮನ ತುಂಬಿಕೊಳ್ಳಬಹುದಾಗಿದೆ. ಈ 8 ನಿಮಿಷದ ಅವಧಿಯಲ್ಲಿ ಪ್ರವಾಸಿಗರು ಹಾರುತ್ತಾ ವಿಂಧ್ಯಗಿರಿ ಹಾಗೂ ಚಂದ್ರಗಿರಿಯನ್ನು ವೀಕ್ಷಿಸಬಹುದು. ಈಗಾಗಲೇ 300ಕ್ಕೂ ಹೆಚ್ಚು ಪ್ರವಾಸಿಗಳು ಮುಂಗಡವಾಗಿ ನೋಂದಾಯಿಸಿಕೊಂಡಿದ್ದು, ಬೆಲ್ 407 ಎಂಬ ಹೆಲಿಕಾಪ್ಟರ್ನಲ್ಲಿ 6 ಜನರು ಏಕಕಾಲದಲ್ಲಿ ಕುಳಿತು ಹೆಲಿರೈಡ್ ಮಾಡಬಹುದಾಗಿದೆ. ಫೆ.27ರ ವರೆಗೆ ಈ ಅವಕಾಶವನ್ನು ಪ್ರವಾಸಿಗರು ಬಳಸಿಕೊಳ್ಳಬಹುದಾಗಿದೆ. ಜನತೆಗಾಗಿ ಸೇವೆಯನ್ನು ಆರಂಭಿಸುವ ಪೂರ್ವಭಾವಿಯಾಗಿ ಮಂಗಳವಾರ ಸಂಜೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಕುಟುಂಬದೊಂದಿಗೆ ರಿಹರ್ಸಲ್ ರೈಡ್ ಮಾಡಿದರು.

Devotees and travellers can make a memorable Mahamastakabhisheka using this opportunity to celebrate the 88th edition of Mahamastakabhisheka by taking up a Heli Ride in Shravanabelagola. The rides will be available from Wednesday for a period of 8 mins. Flying around Vindhyagiri and Chandragiri for a mere ₹ 2100 per ride, travellers can take home a wonderful memories this time. Bell 407 helicopter that can accommodate 6 tourists at a time has been made available for rides. Heli Ride will be available upto 27th of February. Already more than 300 visitors have registered for this service. As a precursor, District Commissioner Rohini Sindhoori took a rehearsal ride on Tuesday of 20th of February.

For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka2018-Official App.
Visit our website : www.mahamastakabhisheka2018.com
Fallow us on Facebook: facebook.com/2018mastakabhisheka/ Daily updates on Mahamastakabhisheka2018, bhahubali, Kalashabooking, events, Lord Gommateshwara, Sharvanabelagola, Hassan.