News and Updates

ಬೆಳಗೊಳಕ್ಕೆ ಒಂಭತ್ತು ವಿಶೇಷ ರೈಲುಗಳು / Nine special trains to Belagola ( Shravanabelagola Mahamastakabhisheka 2018 )

ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರ ಅನುಕೂಲಕ್ಕಾಗಿ ಫೆ. 10ರಿಂದ 9 ವಿಶೇಷ ರೈಲುಗಳ ಸಂಚಾರ ಆರಂಭಗೊಳ್ಳಲಿದೆ. ಯಶವಂತಪುರದಿಂದ ಶ್ರವಣಬೆಳಗೊಳ ಮಾರ್ಗವಾಗಿ ಹಾಸನಕ್ಕೆ ನಾಲ್ಕು ಜೋಡಿ ರೈಲುಗಳ ವ್ಯವಸ್ಥೆಯಾಗಿದ್ದು, ಇದೇ ರೀತಿ ಹಾಸನದಿಂದಲೂ ರೈಲುಗಳು ಸಂಚರಿಸಲಿವೆ. ಮೈಸೂರು ಮಾರ್ಗವಾಗಿ ಸಂಚರಿಸುತ್ತಿದ್ದ ಯಶವಂತಪುರ-ಮೀರಜ್‌ ರೈಲು ಕೂಡ ಶ್ರವಣಬೆಳಗೊಳ ಮಾರ್ಗವಾಗಿ ಸಂಚರಿಸಲಿದೆ. ಈ ಮಾರ್ಗವಾಗಿ ಹೊಸ ರೈಲುಗಳನ್ನು ಈಗಾಗಲೇ ಪ್ರಯೋಗಾತ್ಮಕವಾಗಿ ಓಡಿಸಲಾಗುತ್ತಿದೆ.

ದೂರದ ಊರುಗಳಿಂದ ಆಗಮಿಸುವ ಭಕ್ತರು, ಯಾತ್ರಾರ್ಥಿಗಳು, ಪ್ರವಾಸಿಗರಿಗಾಗಿ ರೈಲ್ವೆ ನಿಲ್ದಾಣದ ಆವರಣದಲ್ಲಿಯೇ ತಾತ್ಕಾಲಿಕವಾಗಿ ಬೃಹತ್‌ ಸಭಾಂಗಣ ನಿರ್ಮಿಸಲಾಗಿದೆ. ಎರಡು ಸಾವಿರ ಮಂದಿ ಇಲ್ಲಿ ವಿಶ್ರಾಂತಿ ಪಡೆಯಬಹುದಾಗಿದೆ. ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪಕ್ಕದಲ್ಲಿಯೇ ಕ್ಯಾಂಟೀನ್‌ ತೆರೆಯಲು ಸಿದ್ಧತೆ ನಡೆಯುತ್ತಿದೆ. ಪ್ರಯಾಣಿಕರಿಗೆ ಧ್ವನಿವರ್ಧಕದ ಮೂಲಕ ಮಾಹಿತಿ ವ್ಯವಸ್ಥೆಯಿರುತ್ತದೆ.

For the benefit of travellers to Shravanabelagola, nine special trains have been arranged and will be running from 10th February. Starting from Yeshwanthpur, the trains pass via Shravanabelagola to Hassan. The Yeshwanthpur- Meeruj Express train that weas being run via Mysuru is experimentally being run through Shravanabelagola route.

A temporary facility for travellers, devotees and pilgrims has been made in the railway premises that has a capacity of two thousand. Basic civic amenities for men and women has been created. Plans are afoot to run a food canteen to the aid of travellers. Public announcement system is in place giving information about the arrival and departure of trains.

For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka2018-Official App.
Visit our website : www.mahamastakabhisheka2018.com
Fallow us on Facebook: facebook.com/2018mastakabhisheka/ Daily updates on Mahamastakabhisheka2018, bhahubali, Kalashabooking, events, Lord Gommateshwara, Sharvanabelagola, Hassan.