MahaMastakabhisheka

ಶ್ರವಣಬೆಳ್ಗೊಳದಲ್ಲಿರುವ ಮೇರುಮೂರ್ತಿ ಶ್ರೀ ಗೊಮ್ಮಟೇಶ್ವರನಿಗೆ ಸಾಂಪ್ರದಾಯಿಕವಾಗಿ ಅಭಿಷೇಕ ಮಾಡುವುದನ್ನು ಮಹಾಮಸ್ತಕಾಭಿಷೇಕವೆಂದು ಕರೆಯಲಾಗುತ್ತದೆ. ಈ ವೈಭವೋಪೇತ ಅಭಿಷೇಕವು ಹನ್ನೆರಡು ವರ್ಷಗಳಿಗೊಮ್ಮೆ ಸಂಪನ್ನವಾಗುವುದು. ಆದ್ದರಿಂದ ಜಗದಾದ್ಯಂತ ಜೈನ ಸಂಪ್ರದಾಯಸ್ಥರಿಗೆ ಮಹಾಮಸ್ತಕಾಭಿಷೇಕವು ಅತ್ಯಂತ ಪವಿತ್ರವಾದ, ಪುಣ್ಯತರವಾದ ಮತ್ತು ಪ್ರಮುಖವಾದ ಆಚರಣೆಯಾಗಿದೆ.

ಐತಿಹಾಸಿಕ ದಾಖಲೆಗಳ ಪ್ರಕಾರ ಪ್ರಥಮ ಮಹಾಮಸ್ತಕಾಭಿಷೇಕವು ಕ್ರಿ.ಶ. 981ರಲ್ಲಿ ನಡೆಯಿತು. ಶ್ರವಣಬೆಳ್ಗೊಳದ ಬೃಹತ್ ಗೊಮ್ಮಟನ ವಿಗ್ರಹವನ್ನು ಗಂಗ ರಾಜರ ಸೇನಾಧಿಪತಿ ಹಾಗೂ ಮಂತ್ರಿಯಾಗಿದ್ದ ಚಾವುಂಡರಾಯನು ಕ್ರಿ.ಶ. 981-982ರಲ್ಲಿ ಸ್ಥಾಪಿಸಿದನೆಂದು ತಿಳಿದುಬರುತ್ತದೆ. ಈ ಉತ್ಸವವನ್ನು ವೀಕ್ಷಿಸಲು ಜಗತ್ತಿನ ಮೂಲೆ-ಮೂಲೆಗಳಿಂದ ಅನೇಕಾನೇಕ ಜೈನ ಮುನಿಗಳು, ಆಚಾರ್ಯರು, ಆರ್ಯಿಕೆಯರು, ಭಟ್ಟಾರಕರೇ ಮೊದಲಾದವರು ಬರುತ್ತಾರೆ.

ಮಹಾಮಸ್ತಕಾಭಿಷೇಕವು ಆರಂಭವಾಗುತ್ತಿದ್ದಂತೆ ನೆರೆದಿರುವ ಜನಸ್ತೋಮದ ಮೇಲೆ ಭಕ್ತಾದಿಗಳು 1008 ಕಲಶಗಳಲ್ಲಿರುವ ಪವಿತ್ರ ತೀರ್ಥೋದಕವನ್ನು ಸಿಂಪಡಿಸುತ್ತಾರೆ. ನಂತರ 58.8 ಅಡಿ ಎತ್ತರದ ಶ್ರೀ ಗೊಮ್ಮಟೇಶ್ವರನಿಗೆ ಇಕ್ಷುಕರಸ, ಹಾಲು, ಶ್ವೇತಕಲ್ಕ ಚೂರ್ಣ, ಹರಿದ್ರಾಕಲ್ಕ ಚೂರ್ಣ, ಕಷಾಯ, ಪ್ರಥಮ ಕೋನ ಕಲಶ, ದ್ವಿತೀಯ ಕೋನ ಕಲಶ, ತೃತೀಯ ಕೋನ ಕಲಶ, ಚತುರ್ಥ ಕೋನ ಕಲಶ, ಶ್ರೀಗಂಧ, ಚಂದನ, ಅಷ್ಟಗಂಧ ಮುಂತಾದ ತೀರ್ಥಗಳಿಂದ ಅಭಿಷೇಕವನ್ನು ನೆರವೇರಿಸುತ್ತಾರೆ.

ಇದೇ ಸಾಲಿನ ಫೆಬ್ರುವರಿಯಲ್ಲಿ ನಡೆಯುವ ಮಹಾಮಸ್ತಕಾಭಿಷೇಕವು ಇಪ್ಪತ್ತೊಂದನೇ ಶತಮಾನದ ಎರಡನೇ ಉತ್ಸವವಾಗಿದೆ. ಈ ಹಿಂದೆ, ಮಹಾಮಸ್ತಕಾಭಿಷೇಕವು 2006ನೇ ಇಸವಿಯಲ್ಲಿ ಸಂಪನ್ನಗೊಂಡಿತ್ತು.

ಈ ಬಾರಿ ಶ್ರವಣಬೆಳ್ಗೊಳಕ್ಕೆ ಹರಿದುಬರುವ ಲಕ್ಷಾಂತರ ಜನರನ್ನು ಗಮನದಲ್ಲಿಟ್ಟುಕೊಂಡು ಅಭೂತಪೂರ್ವ ತಯಾರಿಯನ್ನು ಮಾಡಲಾಗಿದೆ.

 

Mahamastakabhisheka or the grand anointment of Lord Gommateshwara at Shravanabelgola is a very important festival for Jains.

According to the historical evidences, the maiden Mahamastakabhisheka took place in 981 A.D. The spectacular Mahamastakabhisheka is in veneration of the 58.8 ft. high monolithic statue of Gommateshwara, which is said to have been created by Chavundaraya, who was the Chief Commander and Minister of Ganga Kings. A large number of Jain Acharyas, Munis, Aryikas, Bhattaraks and monks from across the country come to witness the most colorful event.

As the Mahamastakabhisheka begins, consecrated water is sprinkled on the participants by devotees carrying 1,008 specially prepared vessels called Kalashas. The statue is then bathed and anointed with libations such as milk, sugarcane juice, saffron paste, Kashaya, water mixed with turmeric, sandalwood and vermillion.

The February 2018 Mahamastakabhisheka is the second such festival of the 21st Century as the previous one was held in 2006.

A lot of preparations have gone in for the forthcoming extravaganza as basic facilities have been created for the lakhs and lakhs of people coming to see this world renowned spectacle.