History

ಹಾಸನ ಜಿಲ್ಲೆಯಲ್ಲಿರುವ ಶ್ರವಣಬೆಳಗೊಳವು ಜೈನರ ಪ್ರಮುಖ ಯಾತ್ರಾಸ್ಥಳವಾಗಿದೆ. ಜಗತ್ತಿನಲ್ಲಿಯೇ ಐತಿಹಾಸಿಕ ಹಿನ್ನೆಲೆಯುಳ್ಳ ಗೊಮ್ಮಟೇಶ್ವರನ ಏಕಶಿಲಾ ಮೂರ್ತಿಯು ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಮೇಲಿದೆ. 58.8 ಅಡಿ ಎತ್ತರವಿರುವ ಈ ಗೊಮ್ಮಟೇಶ್ವರ ಮೂರ್ತಿಯು ಶ್ರವಣಬೆಳಗೊಳಕ್ಕೆ ಕಳಶಪ್ರಾಯವಾಗಿದೆ. ಇಲ್ಲಿ, ಕೋಟೆಯ ಬಾಗಿಲು, ಮಹಾದ್ವಾರ, ಸಿದ್ದರಗುಂಡು, ಗುಳ್ಳಕಾಯಜ್ಜಿ ಮೂರ್ತಿಗಳನ್ನು ಕಾಣಬಹುದಾಗಿದ್ದು, ಬೆಟ್ಟವನ್ನು ಹತ್ತಲು ಮೆಟ್ಟಿಲುಗಳಿವೆ. ಗೊಮ್ಮಟೇಶ್ವರ ಮೂರ್ತಿಗೆ ಪ್ರತಿ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕವನ್ನು ನೆರವೇರಿಸಲಾಗುತ್ತದೆ. ಶ್ರವಣಬೆಳಗೊಳದಲ್ಲಿ ಪ್ರಸಕ್ತ ಮಹಾಮಸ್ತಕಾಭಿಷೇಕ ಕಾರ್ಯಕ್ರಮವು ಫೆಬ್ರವರಿ 7, 2018 ರಂದು ಅಧಿಕೃತವಾಗಿ ಆರಂಭಗೊಳ್ಳಲಿದ್ದು, ದಿನಾಂಕ 8 ರಿಂದ 16ರ ತನಕ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಆರಾಧನೆಗಳು ಜರುಗುತ್ತವೆ. ಮಹಾಮಸ್ತಕಾಭಿಷೇಕವು ಫೆಬ್ರವರಿ 17 ರಿಂದ 25ರವರೆಗೆ ನಡೆಯಲಿದ್ದು ಫೆಬ್ರವರಿ 26 ರಂದು ಮುಕ್ತಾಯ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

Shravanabelagola in Hassan district of Karnataka its a popular pilgrim centre. The historic monolithic statue of Lord Gommateshwara is one of the tallest monolithic statues in the world. The 58.8 feet-high statue of Lord Gomateshwara is like the holy-dome or Kalash of Shravanabelagola. One can also see the entrance of a fort, Main door, Siddharagundu, Gullakayajji idol, etc. here. There are well-laid steps to climb the hillock. Mahamastakabhisheka, anointment from tip to toe, is performed to this 58.8-feet-high monolithic statue once in every twelve years. the Mahamastakabhisheka of Shravanabelagola will be officially inaugurated on February 7, 2018. The Panchakalyana pratishthapana Mahotsava and other religious Aradhana events will be held from 8th to 16th of February. The Mahamastakabhisheka, main event will take place between 17th to 25th of February and conclude on 26th February with a grand closing ceremony.

हासन जिल्ला में श्रवणबेलगोल प्रमुख यात्रास्थल है l विश्व में ही अति ऊंँचाई गोम्मटेश्वर का एकशिला की प्रतिमा विंध्यगिरि पहाड के ऊपर है l श्रवणबेलगोल के लिए 58.8 फ़ूट ऊंँचाई यह गोम्मटेश्वर की प्रतिमा कलशप्राय है l यहांँ के किला के प्रवेश द्वार, महाद्वार,सिद्धर्गुंडु, गुळ्ळकायि अज्जि द्वार इत्यदि देख सकते हैं l पहाड चढने के लिए सीढियांँ हैं l गोम्मटेश्वर प्रतिमा को बारह सालों में एक बार महामस्तकाभिषेक किया जाता है l

For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka 2018-Official App.
Visit our website : www.mahamastakabhisheka2018.com
Follow us on Facebook : facebook.com/2018mastakabhisheka/ Daily updates on Mahamastakabhisheka2018, Bahubali, Kalashabooking, Lord Gommateshwara, Sharvanabelagola, Hassan.

ಚಾವುಂಡರಾಯ / Chavundaraya / चावुंडराय ( Shravanabelagola Mahamastakabhisheka 2018 )

ತಲಕಾಡು ಗಂಗರ ಆಸ್ಥಾನದಲ್ಲಿ ದಂಡನಾಯಕನಾಗಿದ್ದ ಚಾವುಂಡರಾಯನು ಬಾಹುಬಲಿ ಮೂರ್ತಿಯನ್ನು ಕ್ರಿ.ಶ 981-982 ರಲ್ಲಿ ಸ್ಥಾಪಿಸಿದನೆಂದು ತಿಳಿದುಬರುತ್ತದೆ. ಮಹಾ ಮಸ್ತಕಾಭಿಷೇಕ ಮಾಡುವಾಗ ಇಂಥ ಪೂಜೆಯನ್ನು ಇನ್ನಾರೂ ಮಾಡಲಾರರೆಂಬ ಗರ್ವ ಅವನಿಗೆ ಬಂದಿತು. ಅಭಿಷೇಕದ ಅಂಗವಾಗಿ ನೂರಾರು ಹಂಡೆ ಹಾಲು ಹಾಗೂ ಕಬ್ಬಿನ ರಸವನ್ನು ಸುರಿದನು. ಮಾಡಿದ ಅಭಿಷೇಕವು ಸೊಂಟದಿಂದ ಕೆಳಕ್ಕೆ ಇಳಿಯಲೇ ಇಲ್ಲ. ಚಾವುಂಡರಾಯನು ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿದ್ದಾಗ ಪದ್ಮಾವತಿ ಯಕ್ಷಿಯು ಅಜ್ಜಿಯ ವೇಷದಲ್ಲಿ ಗುಳ್ಳಕಾಯಿಯೊಂದಿಗೆ ಬಂದು, ಅಟ್ಟಣಿಗೆಯನ್ನು ಏರಿ ತಾನೂ ಅಭಿಷೇಕ ಮಾಡಬೇಕೆಂದು ನಿರ್ದೇಶಿಸಿದಳು. ಅಜ್ಜಿಯು ಗುಳ್ಳಕಾಯಿಯಲ್ಲಿ ತಂದಿದ್ದ ಹಾಲನ್ನು ಬಾಹುಬಲಿ ಮೂರ್ತಿಯ ಮೇಲೆ ಸುರಿದಾಗ, ಹಾಲು ಜಲಪಾತದಂತೆ ಸುರಿದು, ಗೊಮ್ಮಟೇಶ್ವರನ ಪಾದದವರೆಗೂ ಹರಿಯಿತು. ಇದರಿಂದ ಅಚ್ಚರಿಗೊಂಡ ಚಾವುಂಡರಾಯನು, “ದೇವರಿಗೆ ಬೇಕಾಗಿರುವುದು ನಮ್ಮ ಭಕ್ತಿಯೇ ಹೊರತು ನೈವೇದ್ಯವಲ್ಲ” ಎಂಬುದನ್ನು ಮನವರಿತು, ವಿಗ್ರಹದ ಪೂಜೆಗೆ ಮತ್ತು ನಿರ್ವಹಣೆಗೆ ಅಗತ್ಯವಾದ ದಾನ ಹಾಗೂ ದತ್ತಿಗಳನ್ನು ಉದಾರವಾಗಿ ನೀಡಿದನು. ನಂತರ, 17 ನೆಯ ಶತಮಾನದ ಮೈಸೂರು ರಾಜ್ಯದ ಅರಸರಾಗಿದ್ದ ಚಿಕ್ಕದೇವರಾಜ ಒಡೆಯರು, ಶ್ರವಣಬೆಳಗೊಳದಲ್ಲಿ ಕಲ್ಯಾಣಿಯನ್ನು ನಿರ್ಮಿಸಿ ಜನರಿಗೆ ನೀರಿನ ವ್ಯವಸ್ಥೆಯನ್ನು ಮಾಡಿಕೊಟ್ಟರು. ಶ್ರವಣಬೆಳಗೊಳದಲ್ಲಿ ಎಂಟು ಸಣ್ಣ ಹಾಗೂ ದೊಡ್ಡ ದೇವಸ್ಥಾನಗಳನ್ನು, ನಾಲ್ಕು ಮಂಟಪ, ಎರಡು ಕೊಳ, ಐದು ಹೆಬ್ಬಾಗಿಲು, ಮೂರು ಕಂಭಗಳು ಹಾಗೂ ಹತ್ತನೇ ಶತಮಾನದ್ದೆಂದು ತಿಳಿದು ಬರುವ ಕನ್ನಡ, ಸಂಸ್ಕೃತ, ಮಾರ್ವಾಡಿ, ತಮಿಳು, ಮರಾಠಿ ಭಾಷೆಗಳಲ್ಲಿರುವ ಸುಮಾರು 172 ಶಾಸನಗಳನ್ನು ಕಾಣಬಹುದಾಗಿದೆ.

According to sources, Chavundaraya, who was the commander-in-chief of Gangas, installed the statue of Bahubali in 981-82 A.D. While performing Mahamastakabhisheka to this statue, he had a false pride that none else would be able to perform Mahamastakabhisheka to such a gigantic statue. He had collected hundreds of large vessels filled with milk and sugarcane juice to perform the Mahamastakabhisheka. He poured all the milk, sugarcane juice on the head of the statue. However, none of the liquids flew beyond the waist. While Chavundaraya was worrying about this strange situation, Padmavati Yakshi appeared there in the guiise of an aged woman, holding a Gullakayi, climbed the ladder and told everyone there that she wanted to perform the anointment. When the old woman poured the small quantity of milk she had brought in Gullakayi, it flew down the statue in torrents and streams. Milk spread across the statue of Gommata from tip to toe. Bewildered by this strange development, Chavundaraya realised that “God never bothers about what is offered but about devotion and dedication.” He immediately donated and gave away gifts of various things, including some villages, for meeting the expenses of daily puja to the deity and other special events. Later, in 17th century A.D., Chikkadevaraja Wodeyar of Mysore State created a lake here for quenching the thirst of visiting devotees. About 172 inscriptions in Kannada, Sanskrit, Marathi, Tamil, Marwari etc., said to be belonging to tenth century A.D., are found in and around Shravanabelgola. In addition, eight small and big shrines, four Mantaps, two ponds, five giant doors and three pillars are found.

शास्त्रों के अनुसार, चावुंडराय, जो गंगस का प्रधान सेनापति था, ने इर्सा पूर्व ९८१-८२ में बाहुबली की प्रतिमा स्थापित की। इस प्रतिमा का महामस्तकाभिषेक करते समय उसके मन में यह मिथ्या अहंकार था कि कोइ और व्यक्ति इस प्रतिमा का महामस्तकाभिषेक नहीं कर सकता था। उसने विशाल पात्रों में दूध और इर्खं का रस भर कर एकत्र किया था। उसने प्रतिमा के मस्तक पर सारा दूध, इर्खं का रस और घी भी उड़ेल दिया। तथापि, कोइ द्रव कमर से नीचे प्रवाहित नहीं हुआ। जब चावुंडराय इस विलक्षण परिस्थिति के विषय में चिंता कर रहा था, उसी समय एक वृद्धा स्त्री के भेष में पद्मावती यक्षिणी हाथ में गुल्लकायी (घड़ा) लिए आइ और सीढ़ियाँ चढ़कर हर किसी को अभिषेक के बारे में निर्देश देने लगी। वृद्धा स्त्री ने अपने साथ लाइ गुल्लकायी से दूध उड़ेला, और दूध मूसलाधार वर्षा एवं तीव्र जल प्रवाह के समान नीचे प्रवाहित हो गया। गोम्मत की प्रतिमा पर दूध आपादमस्तक फैल गया। इस विलक्षण घटना से अचम्भित, चावुंडराय को बोध हुआ कि "इर्श्वर यह नहीं देखता कि क्या चढ़ाया जा रहा है, बल्कि वह केवल भक्ति और समर्पण देखता है।" उसने देवता की दैनिक पूजा तथा अन्य विशिष्ट समारोहों के खर्च के लिए तत्काल ग्रामों सहित अनेक चीजें दान में भेंट कर दी। आगे चलकर १७वीं शताब्दी इर्स्वी में, मैसूर राज्य के चिक्कदेवराज वोडेयार ने वहाँ आगंतुक भक्तों की प्यास बुझाने के लिए एक झील का निर्माण करवाया। श्रवणबेलगोला के आस-पास कन्नड़, संस्कृत, मराठी, तमिल, मारवाड़ी आदि भाषाओं में उत्कीर्ण लगभग १७२ शिलालेख हैं, जिनके विषय में कहा जाता है कि ये दसवीं शताब्दी इर्स्वी के हैं। इनके अतिरिक्त, आठ छोटे-बड़े मन्दिर, चार मंडप, दो तालाब, पाँच विशाल द्वार और तीन स्तम्भ विद्यमान हैं।

For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka 2018-Official App. Visit our website : www.mahamastakabhisheka2018.com Follow us on Facebook : facebook.com/2018mastakabhisheka/ Daily updates on Mahamastakabhisheka2018, Bahubali, Kalashabooking, Lord Gommateshwara, Sharvanabelagola, Hassan.

ಚಂದ್ರಗಿರಿ / Chandragiri / चन्द्रगिरि ( Shravanabelagola Mahamastakabhisheka 2018 )

ಮೌರ್ಯ ಸಾಮ್ರಾಜ್ಯದ ಸ್ಥಾಪಕನಾದ ಚಂದ್ರಗುಪ್ತ ಚಕ್ರವರ್ತಿಯು ತನ್ನ ಗುರುಗಳಾದ ಭದ್ರಬಾಹು ಮುನಿಗಳೊಡನೆ ಈ ಕ್ಷೇತ್ರಕ್ಕೆ ಆಗಮಿಸಿದ್ದನು ಎಂದು ಹೇಳಲಾಗುತ್ತದೆ. ಈ ಗುರುಶಿಷ್ಯರು ಇಲ್ಲಿಯೇ ತಪವೆಸಗಿ ಕಾಲವಾದರೆಂದೂ, ಇದರಿಂದಾಗಿಯೇ ಈ ಬೆಟ್ಟಕ್ಕೆ ಚಂದ್ರಗಿರಿ ಎಂಬ ಹೆಸರು ಬಂದಿತೆಂದೂ ಹೇಳಲಾಗುತ್ತದೆ. ಇಂದ್ರಗಿರಿಯ ಎದುರಿನಲ್ಲಿರುವ ಚಿಕ್ಕ ಬೆಟ್ಟ ಅಥವಾ ಚಂದ್ರಗಿರಿಯ ಮೇಲೆ ಈಗಲೂ ಭದ್ರಬಾಹು ಬಸದಿ ಹಾಗೂ ಚಂದ್ರಗುಪ್ತ ಬಸದಿಗಳನ್ನು ಕಾಣಬಹುದು. ಇದಲ್ಲದೇ, ಈ ಬೆಟ್ಟದ ಮೇಲೆ ಭದ್ರಬಾಹುವಿನ ಪಾದಗಳ ಅಚ್ಚನ್ನೂ ಕಾಣಬಹುದಾಗಿದೆ.

It is said that Emperor Chandragupta, the founder of Maurya dynasty, had come to Shravanabelagola, along with his royal preceptor (Guru) Bhadrabahu Muni. It is also believed that both the Master and the disciple did penance in this place till their end and that is why, the hill has been called as Chandragiri. Basadis of Bhadrabahu and Chandragupta are still found on a small hillock oppositie Indragiri, which is identified as Chandragiri. In addition, the footprints of Bhadrabahu are imprinted on the hill.

कहा जाता है कि मौर्य वंश का संस्थापक, सम्राट चन्द्रगुप्त अपने राजगुरु भद्रबाहु मुनि के साथ श्रवणबेलगोला पहुँचा था। ऐसी मान्यता भी है कि गुरु और शिष्य, दोनों ही ने इस स्थान में अपने जीवन के अतं तक तपस्या की और इसी कारण से इस पहाड़ी को चन्द्रगिरि कहा गया है। भद्रबाहु और चन्द्रगुप्त के बसादि इन्द्रगिरि के सामने एक छोटे टीले पर आज भी विद्यमान है, जिसे चन्द्रगिरि के रूप में चिन्हित किया गया है। इसके अतिरिक्त, पहाड़ी पर भद्रबाहु के पदचिन्ह विद्यमान हैं।

For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka 2018-Official App.
Visit our website : www.mahamastakabhisheka2018.com
Follow us on Facebook : facebook.com/2018mastakabhisheka/ Daily updates on Mahamastakabhisheka2018, Bahubali, Kalashabooking, Lord Gommateshwara, Sharvanabelagola, Hassan.

ಬಸದಿ ಎಂದರೇನು...? / What are Basdis? ( Shravanabelagola Mahamastakabhisheka 2018 )

ಜೈನ ದೇವಾಸ್ಥಾನಕ್ಕೆ ಇರುವ ಮತ್ತೊಂದು ಪೂರಕ ಹೆಸರೇ “ಬಸದಿ”. ಜೈನ ದೇವಾಲಯ ಜೈನ ಧರ್ಮೀಯರು ಮತ್ತು ಅವರ ಅನುಯಾಯಿಗಳ ಆರಾಧನಾ ಸ್ಥಳ. ದೇಶದ ವಿವಿಧೆಡೆ ಜೈನ ದೇವಾಲಯಗಳಿಗೆ ಬಗೆಬಗೆಯ ಹೆಸರುಗಳಿವೆ. ಗುಜರಾತ್ ಮತ್ತು ರಾಜಾಸ್ಥಾನದಲ್ಲಿ “ದೆರಾಸರ್ “ಎಂಬ ಹೆಸರಿನಿಂದ ಕರೆದರೆ, ದಕ್ಷಿಣಭಾರತದಲ್ಲಿ ವಿಶೇಷವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಜೈನ ದೇವಾಲಯಗಳನ್ನು “ಬಸದಿ” ಎಂದು ಕರೆಯಲಾಗುತ್ತದೆ. ಐತಿಹಾಸಿಕವಾಗಿ ಉತ್ತರಭಾರತದಲ್ಲಿ ಮೌಂಟ್ ಅಬುವಿನ ದೇವಸ್ಥಾನಗಳಿಗೆ ವಿಮಲಾ ವಸಾಹಿ ಮತ್ತು ಲೂನಾ ವಸಾಹಿ ಎಂಬ ಹೆಸರುಗಳಿದ್ದವು. ಸಂಸ್ಕೃತದ ವಸತಿ ಎಂಬ ಪದವನ್ನು ಆಧರಿಸಿ ಜೈನ ಬಸದಿ ಎಂಬ ಪದವು ವ್ಯುತ್ಪತ್ತಿಹೊಂದಿರಬಹುದೆಂದು ಕೆಲವು ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೈನ ಸನ್ಯಾಸಿಗಳು ಮಳೆಗಾಲ ಹೊರತುಪಡಿಸಿ, ಉಳಿದೆಲ್ಲ ಋತುಗಳಲ್ಲೂ ಯಾತ್ರಾರ್ಥಿಗಳಾಗಿರಬೇಕೆಂಬ ನಿಯಮವಿತ್ತು. ಕ್ರಮೇಣ ಈ ನಿಯಮ ಸಡಿಲಗೊಂಡು ಜೈನ ಮುನಿಗಳು ಬಸದಿಗಳಲ್ಲಿ ವಾಸಿಸಲಾರಂಭಿಸಿದರು. ಜಿನಾಲಯ ಮತ್ತು ಬಸದಿಗಳು ಮೊದಮೊದಲು ದೇಶಪರ್ಯಟನೆಯಲ್ಲಿದ್ದ ಜಿನಮುನಿಗಳ ತಾತ್ಕಾಲಿಕ ವಾಸಸ್ಥಾನಗಳಾಗಿದ್ದು, ನಂತರ ಅವರು ಸದಾ ನೆಲಸುವ ತಾಣಗಳಾದಂತೆ ತೋರುತ್ತದೆ. ಜೈನಮಂದಿರಗಳನ್ನು ಬಸದಿಗಳೆಂದು ಕರೆಯುವುದಕ್ಕೆ ಇದೇ ಕಾರಣವಿರಬಹುದು ಎನ್ನಲಾಗುತ್ತದೆ. ಬಸದಿಗಳು ಜಿನಮುನಿಗಳ ವಾಸಸ್ಥಳಗಳಷ್ಟೇ ಅಲ್ಲದೆ ಪೂಜಾಗೃಹಗಳೂ ಆಗಿದ್ದವು ಎಂಬುದು ಕೆಲವರ ಅಭಿಪ್ರಾಯ. ಕರ್ನಾಟಕ ಸೇರಿದಂತೆ, ಭಾರತದ ಅನೇಕ ರಾಜ್ಯಗಳಲ್ಲಿ ಸಹಸ್ರಾರು ಪ್ರಾಚೀನ ಬಸದಿಗಳು ದೊರೆತಿದ್ದು, ಇವುಗಳು ಜೈನರ ಇತಿಹಾಸ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತವೆ.

Basdi is synonymous of a traditional Jain temple. Jain temple is the place of worship for Jains and their followers. Jain temples at different locations across the country are called differently. In Gujarat and Rajasthan, they are known as Derasar; in south India, especially in Karnataka and Maharashtra, they are called as Basdi. Historically, Jain temples atop Mount Abu in north India are called as Vimala Vasahi and Luna Vasahi. Some scholars opine that the terms Jain Basdi might have been derived from the Sanskrit word Vasati. It is stated that the Jain monks of yore were required to keep travelling throughout the year, except rainy season. With the passage of time, this norm was diluted and the monks began residing in Basdis. Earlier, Jinalayas or Jain Basdis were temporary shelters of the touring Jain monks. Later, it appears that these Basdis became permanent places of residence for Jain monks. This phenomenon might be one of the reasons for Jain temples being named as Basdis, which not only serve as shelters of monks but also places of worship for them. Thousands of Jain Basdis have been found in Karnataka as well as other States of India, even as they serve as glorious monuments that reflect the cultural and historical background of Jainism.

For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka 2018-Official App.
Visit our website : www.mahamastakabhisheka2018.com
Follow us on Facebook : facebook.com/2018mastakabhisheka/ Daily updates on Mahamastakabhisheka2018, Bahubali, Kalashabooking, Lord Gommateshwara, Sharvanabelagola, Hassan.

ದೊಡ್ಡ ಬೆಟ್ಟ / Dodda Betta or the big hillock / बडा पहाड -परिचय ( Shravanabelagola Mahamastakabhisheka 2018 )

ದೊಡ್ಡಬೆಟ್ಟದ ಗೊಮ್ಮಟ ವಿಗ್ರಹವು ಶಕ್ತಿಯುತ ಆಯಸ್ಕಾಂತದಂತೆ ಎಲ್ಲರನ್ನೂ ಆಕರ್ಷಿಸುವುದು. ಅದನ್ನು ಕಂಡು ಮಂತ್ರಮುಗ್ಧರಾದವರು ತಾವು ಶ್ರವಣಬೆಳಗೊಳದಲ್ಲಿ ಕಾಣಬೇಕಾದುದನ್ನೆಲ್ಲ ಕಂಡಂತಾಯಿತು ಎಂದು ಸಂತೃಪ್ತಭಾವನೆಯನ್ನು ತಳೆಯುತ್ತಾರೆ. ಐತಿಹಾಸಿಕವಾಗಿ, ಕಲಾತ್ಮಕತೆ ಹಾಗೂ ಧಾರ್ಮಿಕವಾಗಿ ಮಹತ್ವವುಳ್ಳ ಕಟ್ಟಡಗಳು ಶ್ರವಣಬೆಳಗೊಳದ ಬೆಟ್ಟ ಹಾಗೂ ನಗರ ಪ್ರದೇಶಗಳಲ್ಲಿದ್ದರೂ, ಗೊಮ್ಮಟನ ದರ್ಶನಮಾತ್ರದಿಂದಲೆ ಮೂಕವಿಸ್ಮಿತರಾಗುತ್ತಾರೆ. ಬಾಹುಬಲಿಯ ಭವ್ಯತೆಗೆ ಬೆರಗಾಗಿ, ನೂರಾರು ಮೆಟ್ಟಿಲುಗಳನ್ನೇರಿಳಿದು, ಬಳಲಿ, ಉಳಿದ ಕಟ್ಟಡಗಳ ಬಗ್ಗೆ ವಿವರಗಳು ದೊರೆಯದೆ ನಿರಾಶರಾಗಿ ಇಲ್ಲಿಗೆ ಬರುವ ಬಹುತೇಕ ಯಾತ್ರಿಕರಿಗೆ: ‘ಗೊಮ್ಮಟನನ್ನು ನೋಡಿದ ಬಳಿಕ ಮತ್ತೇನನ್ನು ನೋಡಲು ಉಳಿದಿರಲು ಸಾಧ್ಯ” ಎಂಬ ಭಾವನೆ ಮೂಡುವುದು ಸಹಜ.
ಸುಮಾರು ಕ್ರಿ.ಶ. 8ನೇ ಶತಮಾನದಲ್ಲಿ ದೊಡ್ಡ ಬೆಟ್ಟವನ್ನು ‘ಪೆರ್‌ಕಳ್ವಪ್ಪು’ ಎಂದು ಉಲ್ಲೇಖಿಸಲಾಗಿದೆ. ಆದರೆ ಅದರ ಇತಿಹಾಸ ಆರಂಭವಾಗುವುದು 10ನೇ ಶತಮಾನದಲ್ಲಿ ನಿರ್ಮಾಣಗೊಂಡ ಗೊಮ್ಮಟನ ಮೂರ್ತಿಯಿಂದ. ಇದಾದ ಒಂದೂವರೆ ಶತಮಾನಗಳ ನಂತರ (ಕ್ರಿ.ಶ.1159) ಈ ಕ್ಷೇತ್ರವನ್ನು “ಗೊಮ್ಮಟಪುರ” ವೆಂದು ಕರೆದಿದ್ದರೂ ದೊಡ್ಡಬೆಟ್ಟಕ್ಕಿದ್ದ ಪ್ರತ್ಯೇಕ ಹೆಸರು ನಮಗೆ ತಿಳಿಯದು. ಈಗ ಪ್ರಚಾರದಲ್ಲಿರುವ ‘ಇಂದ್ರಗಿರಿ’ ಅಥವ ‘ವಿಂಧ್ಯಗಿರಿ’ ಎಂಬ ಪದವು ಶ್ರವಣಬೆಳಗೊಳದ ಯಾವ ಶಾಸನದಲ್ಲಿಯೂ ಬಳಕೆಯಾಗಿಲ್ಲ.
ಗೊಮ್ಮಟನ ಬೃಹತ್ ಶಿಲಾಮೂರ್ತಿಯಂತೆ ಬೋಳುಬಂಡೆಯ ದೊಡ್ಡಬೆಟ್ಟವು ಬೆರಗು, ಭಕ್ತಿಗಳನ್ನು ಮೂಡಿಸುವ ಸಾಮರ್ಥ್ಯ ಹೊಂದಿದೆ. ಗಿಡಬಳ್ಳಿಗಳು ಅಪರೂಪವಾಗಿರುವ, ಕಂದುಬಣ್ಣದ, ಈ ಕಗ್ಗಲ್ಲ ಕಕುಭವು ಏಳು ಬಗೆಯ ಕಟ್ಟಡಗಳನ್ನು ಹೊತ್ತುನಿಂತಿದೆ.
ಅವುಗಳಲ್ಲಿ –
ಎಂಟು ಚಿಕ್ಕ-ದೊಡ್ಡ ದೇವಾಲಯಗಳು (ಬ್ರಹ್ಮದೇವ, ಚವ್ವೀಸ ತೀರ್ಥಂಕರ, ಒದೆಗಲ್ಲು, ಚನ್ನಣ್ಣ, ಭರತ-ಬಾಹುಬಲಿ, ಸಿದ್ಧರ ಬಸ್ತಿಗಳಲ್ಲದೆ ಗೊಮ್ಮಟ ಮತ್ತು ಗೊಮ್ಮಟನ ಸುತ್ತಾಲಯಗಳು)
2. ನಾಲ್ಕು ಮಂಟಪಗಳು (ಚಾಗದ, ಚನ್ನಣ್ಣ, ಗುಳ್ಳಕಾಯಿ ಹಾಗೂ ಒಡೆಯರ ಮಂಟಪಗಳು)
3. ಎರಡು ದೊಣೆಗಳು (ಚನ್ನಣ್ಣಬಸ್ತಿಯ ಇಕ್ಕೆಲಗಳಲ್ಲಿವೆ)
4. ಐದು ದ್ವಾರವಾಡ ಇಲ್ಲವೆ ಕೋಟೆಯ ಗೋಡೆಗಳು (ಬೆಳ್ಳಿ ಬಾಗಿಲೆಂದು ಕರೆಯಲ್ಪಡುವ ಹೊರಕೋಟೆ, ಅಖಂಡಬಾಗಿಲು, ಕಂಚಿಗುಬ್ಬಿ ಬಾಗಿಲು, ಗುಳ್ಳಕಾಯಿ ಅಜ್ಜಿ ಬಾಗಿಲು ಹಾಗೂ ಗೊಮ್ಮಟ ಸುತ್ತಾಲಯ)
5. ಮೂರು ಸ್ತಂಭಗಳು (ಚಾಗದ ಕಂಬ, ಚನ್ನಣ್ಣಬಸ್ತಿಯ ಮಾನಸ್ತಂಭ ಹಾಗೂ ಗುಳ್ಳಕಾಯಿ ಅಜ್ಜಿಯ ಯಕ್ಷಸ್ತಂಭ)
6. ಎರಡು ತೋರಣಗಳು (ಇವೆರಡೂ ಸೋಪಾನದ ದಾರಿಯಲ್ಲಿರುವುವು)
7. 172 ಶಾಸನಗಳು (10ನೇ ಶತಮಾನದಿಂದ 19ನೇ ಶತಮಾನದವರೆಗಿನ ಈ ಶಾಸನಗಳು ಕನ್ನಡ, ಸಂಸ್ಕೃತ, ಮಾರ್ವಾಡಿ ಮಹಾಜನಿ, ತಮಿಳು ಹಾಗೂ ಮರಾಠಿ ಭಾಷೆ ಲಿಪಿಗಳಲ್ಲಿವೆ.
ಸಮುದ್ರಮಟ್ಟಕ್ಕಿಂತ 3288 ಅಡಿ ಹಾಗೂ ಭೂಮಟ್ಟಕ್ಕಿಂತ 438 ಅಡಿ ಎತ್ತರ ಇರುವ ಈ ಬೆಟ್ಟದ ಮೇಲೆ ಕಣಿವೆ ಪ್ರದೇಶವನ್ನೆಲ್ಲ ವೀಕ್ಷಿಸುತ್ತ, ಬಯಲಿನಲ್ಲಿ ನಿಂತಿರುವ, ಬಾಹುಬಲಿಯನ್ನು ಕನಿಷ್ಠ 14 ಕಿ.ಮೀ. ದೂರದಿಂದ ಕಾಣಬಹುದು. ಕಣಿವೆ ಕ್ಷೇತ್ರಗಳನ್ನಲ್ಲದೆ ಜೈನಧರ್ಮ, ಕಲೆ, ಇತಿಹಾಸ ಹಾಗೂ ಕನ್ನಡ ಸಾಹಿತ್ಯದ ಮೇಲೆ ಕ್ರಿ.ಶ. ಸು. 980ರಿಂದ ಬಾಹುಬಲಿಯು ತನ್ನ ಪ್ರಭಾವ ಬೀರುತ್ತ ನಿಂತಿರುವನು. ಕಗ್ಗಲ್ಲಿನ ಏಕಶಿಲೆಯಲ್ಲಿ ನಿರ್ಮಾಣಗೊಂಡು ಪ್ರತಿಷ್ಠಾಪಿಸಲ್ಪಟ್ಟಿರುವ ಜಗತ್ತಿನ ಏಕಮಾತ್ರ ವಿಗ್ರಹವಾದ ಈ ಗೊಮ್ಮಟನ ಯೋಗ ಗಾಂಭೀರ್ಯ, ಗಣಿತಕ್ಕೆಟುಕದ ಪ್ರಮಾಣ, ಗಾತ್ರಗಳನ್ನು ನಾವು ಬೇರೆ ಯಾವ ವಿಗ್ರಹದಲ್ಲಿಯೂ ಕಾಣಲಾಗುವುದಿಲ್ಲ. ಪೋಷಕನ ಕೊಡುಗೆ, ಉತ್ಕೃಷ್ಟ ಶಿಲ್ಪಿಯ ಕೌಶಲ್ಯ ಜೊತೆಗೂಡಿದಾಗ ಇಂತಹ ಒಂದು ಭವ್ಯ ವಿಗ್ರಹದ ನಿರ್ಮಾಣ ಸಾಧ್ಯ.
ಈ ಬೆಟ್ಟದ ಇತಿಹಾಸ: ಬೆಟ್ಟದ ಶಿಖರಭಾಗದಲ್ಲಿ ಬಿಸಿಲಿನಲ್ಲಿ ನಿಂತ ಹೆಬ್ಬಂಡೆಗೆ ಸು. ಕ್ರಿ.ಶ. 980ರಲ್ಲಿ ಗಂಗರಸರ ಮಂತ್ರಿಯೊಬ್ಬ ಮೂರ್ತಿ ಸ್ವರೂಪವೀಯಲು ಕಾರಣನಾದ. ಅಲ್ಲಲ್ಲಿ ಹಾಸಿದ್ದ ಬಂಡೆಕಲ್ಲುಗಳ ಮಧ್ಯೆ ದಾರಿ ಮಾಡಿ ಒಂದು (ಇಂದು ಅಖಂಡ ಬಾಗಿಲೆಂದು ಹೆಸರಾದ) ದ್ವಾರವನ್ನು ರಚಿಸಿದ. ಈ ದ್ವಾರದ ಮೇಲಿನ ಬಂಡೆಯ ಬೋಳು ಮೈಯಲ್ಲಿ ಗಜಲಕ್ಷ್ಮಿಯ ಭವ್ಯಮೂರ್ತಿಯನ್ನು ಕೊರೆಸಿದ. ಚಿಕ್ಕದಾದರೂ ತುಂಬಾ ಚೆಲುವಾದ ಚಾಗದ ಕಂಬವನ್ನು ಆ ದ್ವಾರದ ದಕ್ಷಿಣಭಾಗದಲ್ಲಿ ನೆಟ್ಟ. 10-11ನೇ ಶತಮಾನದಲ್ಲಿ ಬಂದ ಯಾತ್ರಿಕನು ಇದನ್ನುಳಿದು ಬೇರಾವುದನ್ನೂ ಈ ಕಗ್ಗಲ್ಲ ಬೆಟ್ಟದ ಮೇಲೆ ಕಾಣಲು ಸಾಧ್ಯವಿರಲಿಲ್ಲ. ಸುಮಾರು ಎರಡು ಶತಮಾನಕ್ಕೂ ಹೆಚ್ಚು ಕಾಲ ದೊಡ್ಡಬೆಟ್ಟದ ಬಹುಭಾಗ ಬಯಲಾಗಿಯೇ ಉಳಿದಿತ್ತು. ಹನ್ನೆರಡನೆಯ ಶತಮಾನದ ಆರಂಭದಲ್ಲಿ ಗೊಮ್ಮಟನ ರಕ್ಷಣೆಗೆ ಒಂದು ಸುತ್ತಾಲಯ ನಿರ್ಮಾಣವಾಯಿತು. ಕಾಲಕ್ರಮೇಣ ಈ ಸುತ್ತಾಲಯವು ಒಂದು ಪ್ರದಕ್ಷಿಣಾಪಥವಾಗಿ, ದೇವಾಲಯವಾಗಿ, ಮಾರ್ಪಟ್ಟಿತು. 12-13ನೇ ಶತಮಾನಗಳ ಈ ಕಟ್ಟಡದಲ್ಲಿ ಅನೇಕ ತೀರ್ಥಂಕರರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಗೊಮ್ಮಟನ ಬೃಹತ್‌ಪಾದದ ಇಕ್ಕೆಲಗಳಲ್ಲಿ ಅವನ ನಿರಾಡಂಬರ ಮೈಮಾಟಕ್ಕೆ ವ್ಯತಿರಿಕ್ತವಾಗಿ, ಮೈತುಂಬ ಅಲಂಕಾರ ಮಾಡಿಕೊಂಡ, ಚಾಮರಫಲವನ್ನು ಕೈತುಂಬ ಹಿಡಿದ, ಹೊಯ್ಸಳಕಾಲದ ಪಾಲಕರು ನಿಂತರು. ಅಲ್ಲಿಂದ ಅನತಿ ದೂರದಲ್ಲಿ ಒಂದು ಮುಖಮಂಟಪ ನಿರ್ಮಾಣವಾಯಿತು. ಈ ಮುಖಮಂಟಪದ ಭುವನೇಶ್ವರಿಯಲ್ಲಿ ದೇವೇಂದ್ರನ, ಅಷ್ಟದಿಕ್ಪಾಲಕರ, ಮೂರ್ತಿಫಲಕಗಳನ್ನು ಸೇರಿಸಲಾಯಿತು. ಮುಖಮಂಟಪದ ಎದುರಿನಲ್ಲಿ ನೆಲಮಟ್ಟದಿಂದ ಮುಕ್ಕಾಲು ಭಾಗ ಕೆಳಕ್ಕಿಳಿದ ಮಾನಸ್ತಂಭ ಹಾಗೂ ಅದರ ಮೇಲಿರುವ ಒಂದು ಯಕ್ಷನ ಮೂರ್ತಿಯೂ ಈ ಕಾಲದಲ್ಲಿ ಸೃಷ್ಟಿಗೊಂಡವು. ಈ ಸ್ತಂಭವನ್ನು ಬಳಸಿ ಒಂದು ಮಂಟಪ (ಇಂದು ಗುಳ್ಳೆಕಾಯಿ ಮಂಟಪವೆಂದು ಹೆಸರಾಗಿದೆ)ವು ಸಿದ್ಧವಾಯಿತು.
ಅಲ್ಲಿಂದ ಕೆಳಗಿದ್ದ ಅಖಂಡ ಬಾಗಿಲ ಇಬ್ಬದಿಯ ಬಂಡೆಯಲ್ಲಿ ಎರಡು ಚಿಕ್ಕ ಗೂಡುಗಳನ್ನು ಕೊರೆದು, ಅವುಗಳಲ್ಲಿ ಭರತ-ಬಾಹುಬಲಿಯ ಉಬ್ಬುಚಿತ್ರಗಳನ್ನು ಕೊರೆದದ್ದು ಈ ಕಾಲದಲ್ಲಿಯೇ. ಆ ದ್ವಾರದ ಕೆಳಗಿದ್ದ (ಚಾವುಂಡರಾಯನ ಕಾಲದ) ಲತಾ-ಪುಷ್ಪಗಳಿಂದ ಬಳಸಿದ ಕಂಬವನ್ನು ಚಾಗದ ಕಂಬವೆಂದು ಕರೆದು, ಆ ಕಂಬದ ಮೇಲೆ ಒಂದು ಯಕ್ಷನ ಮೂರ್ತಿಯನ್ನು ಕೂಡಿಸಲಾಯಿತು.
12ನೇ ಶತಮಾನದಿಂದ ಮುಂದಿನ ಎರಡುನೂರು ವರ್ಷಗಳಷ್ಟು ಅವಧಿಯಲ್ಲಿ ಬೇರಾವ ಕಟ್ಟಡವೂ ಇಲ್ಲಿ ನಿರ್ಮಾಣಗೊಳ್ಳಲಿಲ್ಲ. 14ನೇ ಶತಮಾನದ ಆರಂಭದಲ್ಲಿ ಸುತ್ತಲ ಬಯಲು ಮತ್ತಷ್ಟು ಕರಗಿ ತ್ರಿಕೂಟಬಸ್ತಿ (ಇಂದು ಒದೆಗಲ್ಲು ಬಸ್ತಿ ಎಂದು ಕರೆಯಲ್ಪಟ್ಟಿರುವ) ಹಾಗೂ ಸಿದ್ಧರ ಬಸ್ತಿ (ಸು. 14ನೇ ಶತಮಾನದ ಕೊನೆಯಲ್ಲಿ) ಗಳು ನಿರ್ಮಾಣಗೊಂಡವು. ಬಹುಶಃ 17ನೇ ಶತಮಾನದವರೆಗೂ ಈ ಸ್ಥಿತಿ ಮಾರ್ಪಾಟಾಗಲಿಲ್ಲ. ಕ್ರಿ.ಶ. 1648ರಲ್ಲಿ (ಒದೆಗಲ್ಲು ಬಸ್ತಿ ಬಳಿಯಲ್ಲಿರುವ) ಚವ್ವೀಸ ತೀರ್ಥಂಕರ ಬಸ್ತಿ ಹಾಗೂ 1667ರಲ್ಲಿ ಚನ್ನಣ್ಣ ಬಸ್ತಿಗಳು ನಿರ್ಮಾಣಗೊಂಡು ಬೆಟ್ಟದ ಬಹುಭಾಗವನ್ನು ಆವರಿಸಿದವು.
ಇಂದಿನ ಗೊಮ್ಮಟ ಸುತ್ತಾಲಯ, ಮುಖಮಂಟಪ, ಗುಳ್ಳಕಾಯಿ ಅಜ್ಜಿಯ ಮೇಲ್ಮಂಟಪ, ಅಜ್ಜಿಯ ವಿಗ್ರಹ, ಚಾಗದ ಕಂಬದ ಮೇಲ್ಮಂಟಪ, ಬ್ರಹ್ಮದೇವರ ಮಂಟಪ ಮುಂತಾದವುಗಳೆಲ್ಲ ಬಹುಶಃ 18ನೇ ಶತಮಾನದಲ್ಲಿ ನಿರ್ಮಾಣಗೊಂಡವು ಇಲ್ಲವೆ ಪುನರ್ನಿರ್ಮಾಣಗೊಂಡವೆಂದು ತೋರುವುದು. ದೊಡ್ಡ-ಸಣ್ಣ ಕೋಟೆ ಗೋಡೆಗಳು, ದ್ವಾರವಾಡಗಳೂ ಈ ಕಾಲದಲ್ಲಿ ಕಟ್ಟಲ್ಪಟ್ಟವು. ದಕ್ಷಿಣದಲ್ಲಿರುವ ಮೆಟ್ಟಿಲುಗಳನ್ನು ಕಳೆದ ಶತಮಾನದಲ್ಲಿ ಕೊರೆಸಲಾಯಿತು. 1967ರ ಮಸ್ತಕಾಭಿಷೇಕಕ್ಕೆ ಮುಂಚೆ ಈ ಬೆಟ್ಟವನ್ನು ಹತ್ತಿಳಿಯಲು ಒಂದೇ ದಾರಿ ಇತ್ತು. ಅದೇ ವರ್ಷ ಮಸ್ತಕಾಭಿಷೇಕಕ್ಕೆ ಬಂದ ಯಾತ್ರಿಕರ ಅನುಕೂಲಕ್ಕಾಗಿ ಪಶ್ಚಿಮದ ಮೆಟ್ಟಿಲು ದಾರಿಯನ್ನು ನಿರ್ಮಿಸಲಾಯಿತು.
ಷ.ಶೆಟ್ಟರ - ಶ್ರವಣಬೆಳಗೊಳ ಪುಸ್ತಕದಿಂದThe Gommateshwara statue atop the big hillock attracts people like a powerful magnet. After seeing the most impressive statue of Gommata of Shravanabelgola, the spellbound visitors often feel that they have seen whatever is worth seeing in the world. Although there are several historical monuments, archaeologically astounding, spiritually awakening and interesting structures in and around Shravanabelgola, the very first look at Gommata statue makes anyone fully satisfied and solemnly touched. After visiting several other monuments and getting disappointed for lack of adequate information about them, the travelers come to the big hillock, stand in front of the stately statue of Gommata and heave a sigh of relief to state within “Is there anything left unseen in the world!” Such is the influence that the statue of Gommata casts on the visitor.

It is mentioned that during 8th Century A,D., the Dodda Betta was being called as “Perkalvappu”. However, the history of this hillock actually commences from around 10th Century with the creation and consecration of Gommateshwara statue. Even though the place came to be known as Gommatapura nearly one-and-a-half centuries after the installation of the statue, there is no record to believe that this holy place was being called as Dodda Betta. The name of Indragiri or Vindhyagiri, which is currently in vogue, does not find mention in any of the inscriptions either.
Like the huge monolithic statue of Gommata, the big hillock too awakens devotion and bewilderment in the minds of visitors. Fully covered by rare creepers, herbs and shrubs, this reddish rocky hill is adorned with seven types of buildings, namely:

1. Eight small and big shrines dedicated to Brahma, Chavveesa Tirthankara, Vodegallu, Channanna, Bharata-Bahubli, Siddhas’ Basadi, Gommata and temples surrounding Gommata.
2. Four mantaps namely, Chagada, Channanna, Gullakayi and Vodeyar’s Mantap.
3. Two ponds (On either side of Channanna Basadi)
4. Five Dwaravadas or fort walls, including the exterior fort called silver door, main door, Kanchigubbi door, Gullakayi Ajji door and the structure around Gommata.
5. Three pillars namely pillar of sacrifice, Manasthambha in Channanna Basadi and the Yaksha pillar of Gullakayi Ajji.
6. Two festoons (both of them are on the way to Sopana)
7. 172 inscriptions belonging to the period from tenth to nineteenth centuries, which are in Kannada, Sanskrit, Marwadi Mahajani, Tamil and Marathi language scripts.

The statue of Bahubali atop this hillock, which is about 3,228 ft. above sea-level and 438 ft. above ground level, is visible from a distance of at least 14 km. Apart from creating the unparalleled history and developing the holy valleys here, the statue of Bahubali has been influencing the Jain culture, art, culture and Kannada literature since 980 A.D. The lone monolithic and magnificent statue of white granite created and consecrated here, its Yogic state, the size that fails any arithmetic calculation and the charm are hard to be seen in any of the statues elsewhere. Such a creation can only be translated into reality with a blend of patron’s contribution and encouragement and artistic dexterity of the sculptor.
History of the hillock: A Minister of a king belonging to Ganga dynasty transformed a huge rock that was lying at the tip of this hillock into a beautiful statue in about 980 A.D. Later, he created a path amidst the rocky stones that were lying here and there and fixed a door, which is presently known as Akhanda Bagilu or solid door. He got a beautiful statue of Gajalakshmi carved in a barren rock, atop the main door. He got a pillar called Chagada kamba, which is quite small in size but inspiringly attractive. Anyone visiting this place till tenth and eleventh centuries A.D. could not see anything else, save these monumental creations.

For the next almost two centuries, a major portion of the big hillock remained plain. In about twelfth century, a wall was constructed around Gommata for protection. As years passed by, the space around the statue came to be used for circumambulation and later it was converted into a temple. Inside this structure, which was constructed in about twelfth and thirteenth centuries A.D., idols of several Tirthankaras were installed. On either side of the huge feet of the statue of Gommata, Guardians (Palakas) of the Hoysala era, bedecked fully and beholding Chamara or royal fan in both hands, have been installed. The appearance of these guards is quite contrary to the nude stately statue of Gommata. At a little distance away from these guards, a tiny Mantap was created and idols of Devendra and Ashtadikpalakas (guardians of eight directions) were installed in it. A pillar called Manastambha and an idol of Yaksha installed at a slightly lower level were created during this period. Subsequently, another Mantapa was created around the Manastambha, which is presently addressed as Gullekayi Mantap.

Later, two tiny nest-like structures were carved in the rocks situated on the two sides of the main door and bas-relief idols of Bharata and Bahubali were carved in each of the nests. Another idol of Yaksha was carved upon the pillar below the Main Door. This pillar belongs to the period of Chavundaraya and is adorned with flowers and creepers.
No other building was raised in this place for about two hundred years from twelfth century A.D., In the beginning of fourteenth century, however, the plain land in front of the hillock was further reduced with the creation of Trikoota Basadi, which is now known as Vodegallu Basadi, and Siddhas’ Basadi, which was created during the latter half of fourteenth century. Perhaps, till about seventeenth century, there was no change in the whole scenario. Most part of the big hillock was filled with the creation of Chaveesa Tirthankara Basadi in 1648 A.D. near Vodegallu Basadi and Channanna Basadi in 1667 A.D.

The corridor around Gommata, the main Mantap, Mantap above Gullakayi Ajji Mantap, idol of the old lady, the mantap above Chagada pillar, Brahmadeva Mantap and other things were either created or renovated during eighteenth century. The small and big fort walls and the surrounding walls were all constructed during this period. The steps on the southern side were created in the last century. Prior to the Mastakabhisheka of 1967, there was only one way to reach the hill top. In the same year, steps were created on the western side of the hillock for the convenience of pilgrims.

बडा पहाड -परिचय

बडे पहाड की गोम्मट विरट्मूर्ति एक शक्तिशाली चुंबक तरह दर्शको को आकर्षित करती है l उस की मोहनी में एक बार आ गये तो बस वे सब महसूस करते है कि इस केंद्र के बाकी सभी स्मारक कुछ भी दिलचस्प नहीं है l इस विस्मयकारी अनुभव से, पहाड पे चढने व उतरने की दैहिक थकावट से, बाकी स्मारकों के बारे में इत्तला की कमी से, बहुतसे दर्शक समझते है कि गोम्मट को देखने से उन्होने श्रवणबेळगोळ की सभी देखने लायक चीजें देख ली हैं l

बडा पहाड पेरकळ्बप्पु ( बडा कळ्बप्पु) के नाम से पहलेपहल इ. स.८वी सदी में उल्लेखित हैं l लेकिन उस का गोम्मट के इतिहास के साथ ही परवर्ती १०वी सदी में आरंभ होता है l डेढ सदी के बाद (इ.स.११५९)नगर विराट्मूर्ति के कारण गोम्मटपुरि कहलाया l लेकिन पहाड को कोई खास नाम नहीं दिय गया l प्रस्तुत नाम इद्रंगिरि या विंध्यगिरि, किसी प्रलेख में उल्लेखित नही हैं l
बडा पहाड अपनी चोटी पे रहनेवाली विराट्मूर्ति के जैसे ही विस्मयकारी है l पेड्पौधों के बगैर होने पर भी यह भूरी- पीली कणाश्म की ढेर सात तरह के स्मारक को रखता है l वे हैं :

१.आठ छोटे व बडे मंदिर
(पहाड के चरण से ब्रह्मदेव के मंदिर, चवीस तीर्थंकर, ओदेगल, चेन्नण्ण, भरत –
बाहुबलि और सिद्धर बस्तियाँ, गोम्मट सुत्तालय और गोम्मट);
२. चार मंटप : (चागद,चेन्नण्ण,गुळ्ळेकायि अज्जि और ओडेयर मंटप);
३. दो तालाब : (चेन्नण्ण बस्ती की दोनों ओर);
४. पाँच प्रवेश द्वार या किले : (बेळ्ळिबागिलु नाम का बाहरी प्राकार; अखंड, कंचि-गुब्बि,
गुळ्ळ्कायि अज्जि तोरण और गोम्मट- सुत्तालय)
५. तीन स्तंभ : ( त्यागद कंभ, चेन्नण्ण बस्ती मानस्तंभ और गुळ्ळकायि अज्जि मंटप की यक्ष
स्तंभ);
६. दो तोरण ( दोनों सोपान पे)
७. २७२ शिलालेख: (परवर्ती १०वी और सदियों के बीच, कन्नड,संस्कृत, मारवाडी-महाजनी,
तमिळु और मराठी इन पाँच भाषाओं में रचित)
पहाड समुद्रस्तर से ३२८८ और जमीन से ४३८ ऊँचा है l विराट्मूर्ति घाटी और मैदान पर छा गयी है और उसकी झलक १४ कि.मी. की दूरी से मिल सकती है l जैन पुराण बताता है कि बाहुबलि की पहली विराट्मूर्ति को भरत ने पोदनपुर में प्रतिष्ठित किया l बयान किया गया है कि वह ५२५ बित्ता(मारु – लगभग एक मीटर) ऊँची है l उस की पीठिका बननेवली ४३८ ऊँची कणाश्म की ढेर और बडे पहाड की ५८’८” ऊँची गोम्मट मूर्ति प्रायः दंतकथित मूर्ति के सदृश है l

इ.स.९८० से गोम्मट न केवल घाटी और मैदान पे वरन जैनधर्म, कला और कर्नाटक के इतिहास व साहित्य पे छा गया है l यह मूर्ति, जो सारी दुनिया में सबसे बडा प्रतिष्ठित कणाश्म का एकाश्मक है और जिस के विराट चेहरे पे अपूर्व यौगिक प्रशांतता है, एक महान कलाकार और एक महान आश्रयदाता की सम्मिलित मेहनत का फल है l

संरक्षित रूप में इस पहाड का इतिहास ऐस है : लगभग इ.स.९८० में एक गंग मंत्री ने चोटी पे खडा हुआ कूट को विराट्मूर्ति में परिवर्तित कर दिया l गोलाश्मों के बीच की खुली जगह को तोरण बनवाया गया(प्रस्तुत अखंड्बागिलु) जिस के ऊँचे भाग को एक बडा गजलक्ष्मी दिल्ला अलंकृत करता है l चागद कंभ नाम का एक अलंकृत वरन छोटे स्तंभ को भी तोरण से कुछ दूर बनवाया गया l १०वी और ११वी सदियों में पहाड पे सिर्फ यही स्मारक थे l

प्रारंभिक १२वी सदी में विराट्मूर्ति को एक घेरा और एक परिसूत्र दिय गया l यह परिसूत्र धीरे गलियारा मंदिर बन गया l १२वी और १३वी सदियों में तीर्थंकरों की मूर्तियाँ उस में प्रतिष्ठित की गयी और गोम्मट के नजदीक दो अलंकृत परिचारक रखे गये l इसी समय एक घेरे को अष्टदिक्पालक और इद्रं के उभरचित्रवाले सामनेवाला द्वारमंटप को , और चोटी पर यक्ष मूर्तिवाला मानस्तंभ(प्रस्तुत गुळ्ळ्कायि अज्जि मंटप कहलानेवाला) को जोडा गया l दो कोठरीयों से अखंडबागिलु को विस्तृत किया गया l एक कोठरी भरत को समर्पित की गयी जबकि दूसरी बाहुबलि को l
इस के बाद लगभग २०० साल तक (प्रारंभिक १२वी से प्रारंभिक १४वी सदी) कोई नया स्मारक बनवाया नहीं गया l प्रारंभिक १४वी सदी में त्रि-मंदिर, जिसे अब ओदेगल बस्ती और सिद्धर बस्ती (परवर्ती १४वी सदी) कहते हैं बनवाये गये l तकरीबन १७वी सदी के आरंभ तक ये सभी खुले हाल में थे जब उन्हे न कोई किला दीवार न इतने तोरण थे l और २५० बरस बाद चवीस तीर्थंकर बस्ती (इ.स.१६४८) और चेन्नण्ण बस्ती (इ.स.१६६६७) और उनके साथ साथ मानस्तंभ बनवाये गये l

प्रस्तुत गोम्मट – सुत्तालय, उसके सामनेवाला द्वारमंटप, गुळ्ळकायि अज्जि मंटप की ऊपरी मंजिल और ब्रह्मदेव मंटप, इन सब को १८वी सदी के बाद या तो जुड्वाया गया तो पूरी तरह से नवीकृत किया गया l

ष.शेट्टर - श्रवणबेळ्गोळ किताब से


For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka 2018-Official App.
Visit our website : www.mahamastakabhisheka2018.com
Follow us on Facebook : facebook.com/2018mastakabhisheka/ Daily updates on Mahamastakabhisheka2018, Bahubali, Kalashabooking, Lord Gommateshwara, Sharvanabelagola, Hassan.

ಶ್ರವಣ / Shravana / श्रवण ( Shravanabelagola Mahamastakabhisheka 2018 )

ಶ್ರವಣ ಎಂದರೆ ಜೈನ ಸನ್ಯಾಸಿ ಎಂದರ್ಥ. ಚಂದ್ರಗಿರಿ ಹಾಗೂ ವಿಂಧ್ಯಗಿರಿ ಬೆಟ್ಟಗಳ ನಡುವೆ ಇರುವ ಬಿಳಿ ಕೊಳದಿಂದಾಗಿ ಇದನ್ನು ಬೆಳಗೊಳ ಎಂದು ಕರೆಯುತ್ತಾರೆ. ಬೆಳ್ಗೊಳದಲ್ಲಿ ಹಲವಾರು ಶ್ರವಣರು (ಜೈನ ಸನ್ಯಾಸಿಗಳು) ನೆಲೆಸಿದ್ದುದರಿಂದ ಈ ಕ್ಷೇತ್ರವು ಶ್ರವಣಬೆಳ್ಗೊಳ ಎಂದು ಪ್ರಸಿದ್ದಿ ಪಡೆಯಿತು.

Shravana means a Jain saint or ascetic or monk. Because of a white pond (water in the pond appears whitish) that exists between Chandragiri and Vindhyagiri, the place was being called Belagola, where “Bel” refers to “Bili” or white and “Gola” means “Kola” or pond. Since several Shravans were living in this holy place, it came to be known as Shravanabelagola.

श्रवण का अर्थ जैन संत या तपस्वी या संन्यासी होता है। चन्द्रगिरि और विंध्यगिरि के बीच अवस्थित एक उजले तालाब (तालाब का पानी उजला दिखता है) को बेलगोला कहा जाता था, जिसमें "बेल" का अर्थ "बिलि" या उजला और "गोला" का अर्थ "कोला" या तालाब है। चूँकि इस पुण्यस्थल में अनेक श्रवणों का निवास था, यह श्रवणबेलगोला के नाम से प्रसिद्ध हो गया।

For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka 2018-Official App.
Visit our website : www.mahamastakabhisheka2018.com
Follow us on Facebook : facebook.com/2018mastakabhisheka/ Daily updates on Mahamastakabhisheka2018, Bahubali, Kalashabooking, Lord Gommateshwara, Sharvanabelagola, Hassan.

ಬಾಹುಬಲಿ / Bahubali / बाहुबली ( Shravanabelagola Mahamastakabhisheka 2018 )

24 ಜೈನ ತೀರ್ಥಂಕರರಲ್ಲಿ ಮೊದಲನೆಯವನಾದ ಆದಿದೇವನಿಗೆ ನೂರುಜನ ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು. ಪ್ರಾಪ್ತವಯಸ್ಸಿಗೆ ಬಂದನಂತರ ಗಂಡುಮಕ್ಕಳಿಗೆ ತನ್ನ ರಾಜ್ಯವನ್ನು ಹಂಚಿ ಆದಿದೇವ ವಿರಕ್ತನಾಗಿ ತಪಸ್ಸು ಮಾಡಲು ತೆರಳಿದನು. ಇತ್ತ ಹಿರಿಯಮಗನಾದ ಭರತೇಶನು ಸಮಸ್ತ ರಾಜ್ಯದ ಚುಕ್ಕಾಣಿಯನ್ನು ಹಿಡಿದು, ತನ್ನ ತಮ್ಮಂದಿರೆಲ್ಲರೂ ತನಗೆ ಅಧೀನರಾಗಿರಬೇಕೆಂದು ಅಪೇಕ್ಷಿಸಿದನು. ಇದಕ್ಕೆ ಬಾಹುಬಲಿಯನ್ನು ಬಿಟ್ಟು 98 ತಮ್ಮಂದಿರು ಭರತೇಶನ ಮೇಲೆ ಬೇಸರಗೊಂಡು ರಾಜ್ಯ ಪರಿತ್ಯಾಗ ಮಾಡಿ ವಿರಕ್ತರಾದರು. ಬಾಹುಬಲಿಯು ತನ್ನ ಹಿರಿಯ ಸಹೋದರನಾದ ಭರತೇಶನ ಮೇಲೆ ಯುದ್ದಕ್ಕೆ ಸಜ್ಜಾದನು. ಇಬ್ಬರೂ ಧರ್ಮಯುದ್ದದಲ್ಲಿ ಪ್ರವೃತ್ತರಾದರು. ಎಲ್ಲಾ ಹಂತದಲ್ಲಿಯೂ ಭರತೇಶನು ಸೋಲುಂಡನು. ಇದರಿಂದ ಕೋಪಗೊಂಡ ಭರತೇಶನು, ಚಕ್ರರತ್ನವನ್ನು ಬಾಹುಬಲಿಯ ಮೇಲೆ ಪ್ರಯೋಗಿಸಲು, ಚಕ್ರವು ಬಾಹುಬಲಿಯನ್ನು ಕೊಲ್ಲದೇ ಸೌಮ್ಯವಾಗಿ ಅವನಿಗೆ ಪ್ರದಕ್ಷಿಣೆ ಮಾಡಿ ನಿಂತಿತು. ಈ ಘಟನೆಯಿಂದ ಬಾಹುಬಲಿಯ ಒಳಗಣ್ಣು ತೆರೆದು, ರಾಜ್ಯ ಲಕ್ಷ್ಮಿಯು ಚಂಚಲೆ ಎಂಬ ಅನುಭವವಾಯಿತು. ಇದರಿಂದಾಗಿ ಬಾಹುಬಲಿಯು ಭರತೇಶನಿಗೆ ರಾಜ್ಯ ಕೋಶಾದಿಗಳನ್ನು ಅರ್ಪಿಸಿ, ದಿಗಂಬರ ಸನ್ಯಾಸಿಯಾಗಿ, ಒಂದು ವರ್ಷ ಕಾಲ ತಪವೆಸಗಿದನು ಎಂದು ಹೇಳಲಾಗುತ್ತದೆ. ಎಲ್ಲ ತ್ಯಾಗ ಮಾಡಿದ ಬಾಹುಬಲಿಯು ತಪಸ್ಸು ಮಾಡಿದರೂ ಜ್ಞಾನ ಪ್ರಾಪ್ತಿಯಾಗಲಿಲ್ಲ. ಕೊನೆಗೆ ಭರತನು ಬಾಹುಬಲಿಯ ಹತ್ತಿರ ಬಂದು, “ನೀನು ನಿಂತ ನೆಲ ನನ್ನದಲ್ಲ, ನಿನ್ನದು. ನೀನು ನಿನ್ನ ಬಗ್ಗೆ ತಿಳಿದುಕೊ” ಎಂದು ಹೇಳಿದಾಗ ಬಾಹುಬಲಿಗೆ ಕೈವಲ್ಯ ಜ್ಞಾನ ಪ್ರಾಪ್ತವಾಯಿತೆಂದು ಹೇಳಲಾಗತ್ತದೆ.

Adideva, the first of the twenty-four Jain Teerthankaras, had 100 sons and two daughters. After attaining proper age, Adideva got dejected and renounced everything, distributed his empire among his one hundred sons and departed for doing penance. Meanwhile, Bharatesha, the eldest son, assumed full charge of the empire and asked all his younger brothers to be subservient to him. Except Bahubali, all the ninety-eight brothers were upset with the attitude of Bharatesha, renounced everything and departed for penance. Bahubali, on the other hand, did not budge. He was preparing to wage a war against his elder brother Bharatesha. Both of them indulged in a spirituous duel. However, Bharatesha suffered defeat at every phase of the war. Enraged by this, Bharatesha fired the Chakraratna, the holy disc, at Bahubali. However, the disc, instead of killing Bahubali, revolved around him and halted at a place in submission. This opened the inner eyes of Bahubali as he felt the Goddess of Kinghood was frail and uncertain. He surrendered the kingdom and all the riches to Bharatesha, undertook an arduous penance as a Digambar for a year. In spite of sacrificing everything and doing penance for a year, Bahubali did not get the ultimate knowledge. Finally, Bharatesha came to Bahubali and said “Say the land you stand on isn’t yours and realise the sel f.” It is said that on hearing this, Bahubali got the Kaivalya Jnana or ultimate knowledge.

चौबीस जैन तीर्थंकरों में प्रथम, आदिदेव के १०० पुत्र और २ पुत्रियाँ थीं। उचित आयु प्राप्त करने के बाद आदिदेव को विरक्ति हो गइ और उन्होंने हरेक वस्तु का त्याग कर दिया, अपने साम्राज्य को एक सौ पुत्रों के बीच बाँट दिया और तपस्या के लिए प्रस्थान कर गए। इस बीच, ज्येष्ठ पुत्र भारतेश ने संपूर्ण साम्राज्य अपने हाथ में ले लिया और अपने सभी अनुज भ्राताओं से अपने अधीन होने को कहा। बाहुबली को छोड़कर, सभी ९८ भ्राता बाहुबली के रुख से दुखी थे, उनलोगों ने हर चीज का त्याग कर दिया और तपस्या के लिए प्रस्थान कर गए। उधर, बाहुबली ने हार नहीं मानी। वह अपने ज्येष्ठ भ्राता भारतेश के विरुद्ध युद्ध की तैयारी करने लगा। दोनों के बीच मदांध द्वन्द्व चला। युद्ध में एक-एक चरण पर भारतेश को पराजय का मुँह देखना पड़ा। इससे क्रोधित भारतेश ने बाहुबली पर पवित्र चक्र, चक्ररत्न से वार किया। किन्तु बाहुबली का वध करने के बदले चक्र उसके चारों ओर परिक्रमा करता रहा और एक स्थान पर विनम्रतापूर्वक स्थिर हो गया। इससे बाहुबली के अतंर्चक्षु खुल गए और उसे राजत्व की देवी की दुर्बलता एवं अनिश्चितता का बोध हुआ। उसने राज-पाट और सारा धन-वैभव भारतेश को समर्पित कर दिया तथा एक वर्ष तक दिगम्बर अवस्था में कठिन तपस्या की। सभी कुछ का त्याग करने और एक वर्ष तक तपस्या करने के बाद भी बाहुबली को परम ज्ञान की प्राप्ति नहीं हुइ। अतंतः, भारतेश बाहुबली के पास आया और कहा, "जिस भूमि पर तुम खड़े हो वह तुम्हारा नहीं है, स्वयं को जानो।" आख्यान बताते हैं कि यह सुनकर, बाहुबली ने कैवल्य ज्ञान या परम सत्य या ज्ञान प्राप्त कर लिया।

For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka 2018-Official App.
Visit our website : www.mahamastakabhisheka2018.com
Follow us on Facebook : facebook.com/2018mastakabhisheka/ Daily updates on Mahamastakabhisheka2018, Bahubali, Kalashabooking, Lord Gommateshwara, Sharvanabelagola, Hassan.

24 ತೀರ್ಥಂಕರರು / 24 Tirthankaras / २४ तीर्थंकर ( Shravanabelagola Mahamastakabhisheka 2018 )

01. ವೃಷಭ (ಆದಿನಾಥ) / Rishabhanath (Adinath) / ऋषभ (आदिनाथ)

02. ಅಜಿತನಾಥ / Ajitnath / अजितनाथ

03. ಸಂಭವನಾಥ / Sambhavanath / सम्भवनाथ

04. ಅಭಿನಂದನನಾಥ / Abhinandananath / अभिनन्दननाथ

05. ಸುಮತಿನಾಥ / Sumatinath / सुमतिनाथ

06. ಪದ್ಮಪ್ರಭ / Padmaprabha / पद्मप्रभ

07. ಸುಪಾರ್ಶ್ವನಾಥ / Suparshvanath / सुपार्श्वनाथ

08. ಚಂದ್ರಪ್ರಭ / Chandraprabha / चन्द्रप्रभ

09. ಪುಷ್ಪದಂತ (ಸುವಿಧಿನಾಥ) / Pushpadanta (Suvidhinatha) / पुष्पदंत (सुविधिनाथ) /

10. ಶೀತಲನಾಥ / Shitalnath / शीतलनाथ /

11. ಶ್ರೇಯಾಂಸನಾಥ / Shreyansanath / श्रेयांसनाथ

12. ವಸುಪೂಜ್ಯ / Vasupujya / वसुपूज्य

13. ವಿಮಲನಾಥ / Vimalnath / विमलनाथ

14. ಅನಂತನಾಥ / Anantanath / अनन्तनाथ

15. ಧರ್ಮನಾಥ / Dharmanath / धर्मनाथ

16. ಶಾಂತಿನಾಥ / Shantinath / शान्तिनाथ

17. ಕುಂಠುನಾಥ / Kunthunath / कुण्ठुनाथ /

18. ಅರನಾಥ / Aranath / अरहनाथ

19. ಮಲ್ಲಿನಾಥ / Mallinath / मल्लिनाथ

20. ಮುನಿ ಸುವ್ರತ / Muni Suvrata / मुनिसुव्रत

21. ನಾಮಿನಾಥ / Nami Natha / नमिनाथ

22. ನೇಮಿನಾಥ / Neminatha / नेमिनाथ

23. ಪಾರ್ಶ್ವನಾಥ / Parshva Natha / पार्श्वनाथ

24. ಮಹಾವೀರ (ವರ್ಧಮಾನ) / Mahavira (Vardhamana) / महावीर (वर्द्धमान)

For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka 2018-Official App.
Visit our website : www.mahamastakabhisheka2018.com Follow us on Facebook : facebook.com/2018mastakabhisheka/ Daily updates on Mahamastakabhisheka2018, Bahubali, Kalashabooking, Lord Gommateshwara, Sharvanabelagola, Hassan.

ಗೊಮ್ಮಟನ ಸೃಷ್ಟಿಯ ಕಥೆ / Story of Gommateshwara statue / गोम्मट सृष्टि की कहानी ( Shravanabelagola Mahamastakabhisheka 2018 )

ಬೃಹತ್ ಶಿಲಾಮೂರ್ತಿಯ ನಿರ್ಮಾಣಕ್ಕೆ ಪ್ರೇರಣೆ ಮತ್ತು ಕಲ್ಪನೆಯು ಚಾವುಂಡರಾಯನಿಗೆ ಬಂದ ಬಗೆ, ತೀರ್ಥಂಕರರನ್ನು ಬಿಟ್ಟು ಬಾಹುಬಲಿಯನ್ನೇ ಅವನು ಆಯ್ದುಕೊಳ್ಳಲು ಕಾರಣಗಳು ನಮಗೆ ತಿಳಿದಿಲ್ಲ.

ಆದರೆ ಯಾವುದೋ ಬಗೆಯ ಸ್ಫೂರ್ತಿಗೊಳಗಾಗಿ ಚಾವುಂಡರಾಯನು ಈ ಶಿಲಾಮೂರ್ತಿಯ ರಚನೆಯನ್ನು ಕೈಕೊಂಡನೆಂಬುದನ್ನು ಮಾತ್ರ ಅಲ್ಲಗಳೆಯುವಂತಿಲ್ಲ. ಗೊಮ್ಮಟನ ಬೃಹತ್ ಶಿಲಾಮೂರ್ತಿಯ ನಿರ್ಮಾಣಕ್ಕಿಂತ ಮೊದಲೇ ಆತನು ತ್ರಿಷಷ್ಠಿ ಲಕ್ಷಣ ಮಹಾಪುರಾಣವನ್ನು ರಚಿಸಿದ್ದನಾದರೂ, ಅದರಲ್ಲಿ ಈ ಮಹಾಶಿಲ್ಪದ ಬಗ್ಗೆ ಯಾವ ಉಲ್ಲೇಖವನ್ನೂ ಮಾಡಿಲ್ಲ. ಚಾವುಂಡರಾಯನ ನಂತರ ಬಂದ ಸಾಹಿತ್ಯ ಮತ್ತು ಐತಿಹ್ಯಗಳು ಈ ವಿಷಯದ ಬಗ್ಗೆ ಬೆಳಕು ಚೆಲ್ಲುತ್ತವೆ.

ಚಾವುಂಡರಾಯನು ಒಮ್ಮೆ ಕವಿಯೊಬ್ಬನನ್ನು ತನ್ನ ರಾಜಸಭೆಗೆ ಆಮಂತ್ರಿಸಿದಾಗ ಆತನು ಆದಿನಾಥ ಮತ್ತು ಅವನ ಮಕ್ಕಳಾದ ಭರತ ಬಾಹುಬಲಿಗಳ ಕಥೆಯನ್ನು ಮನಮುಟ್ಟುವಂತೆ ನಿರೂಪಿಸಿದನು. ಚಾವುಂಡರಾಯನ ತಾಯಿ ಕಾಳಲಾದೇವಿಯು ಪ್ರವಚನವೊಂದರಿಂದ ಪ್ರಭಾವಿತಳಾಗಿ ಭರತನು ಒಂದು ರಾತ್ರಿ ಪೌದನಾಪುರದಲ್ಲಿ ನಿರ್ಮಿಸಿರುವನೆನ್ನಲಾದ ಬಾಹುಬಲಿಯ ಬೃಹತ್ ಮೂರ್ತಿಯ ನಿಜದರ್ಶನ ಪಡೆಯದೆ ಅನ್ನಾಹಾರಗಳನ್ನು ಸೇವಿಸುವುದಿಲ್ಲವೆಂದು ಶಪಥ ಕೈಗೊಂಡಳು.

ತಾಯಿಯ ಇಚ್ಛೆಯನ್ನು ಹೇಗೆ ಈಡೇರಿಸಬೇಕೆಂಬ ಚಿಂತೆ ಚಾವುಂಡರಾಯನ ಮನಸ್ಸನ್ನಾವರಿಸುತ್ತದೆ. ಯುದ್ಧರಂಗವನ್ನು ಭೇದಿಸುವ ಕಲೆಯಲ್ಲಿ ಪರಿಣತಿ ಹೊಂದಿದ್ದ ಚಾವುಂಡರಾಯನು ಅಗಮ್ಯವಾದ ಪೌದನಾಪುರವನ್ನು ಹೇಗೆ ಹುಡುಕಬೇಕೆಂಬುದನ್ನರಿಯದೆ ಪರಿತಪಿಸಿದನು. ಅವನು ತನ್ನ ಗುರು ನೇಮಿಚಂದ್ರ ಸಿದ್ಧಾಂತದೇವನ ಮಾರ್ಗದರ್ಶನ ಯಾಚಿಸಿದಾಗ, “ಭಕ್ತಿ, ಶ್ರದ್ಧೆಯಿಂದ ಮಾತ್ರ ಪೌದನಾಪುರ ತಲುಪಲು ಸಾಧ್ಯ” ಎಂದು ಗುರುಗಳು ಆದೇಶಿಸಿದರು. ಚಾವುಂಡರಾಯನು ‘ತ್ರಿರತ್ನ’ಗಳನ್ನು ಆಚರಿಸಿ, ‘ಪಂಚನಮಸ್ಕಾರ’ಗಳಿಂದ ಮನಸ್ಸನ್ನು ಶುದ್ಧೀಕರಿಸಿಕೊಂಡು, ‘ಅಣುವ್ರತ’ಗಳಿಂದ ದೃಢಗೊಂಡು ಹೊಸ ಬಗೆಯ ಯಾತ್ರೆಗೆ ಸಿದ್ಧನಾದನು. ತೀರ್ಥಂಕರರ ಜೀವನ ಚರಿತ್ರೆಗಳನ್ನೋದಿ ಜ್ಞಾನ ಸಂಪಾದಿಸಿ ಚಾವುಂಡರಾಯ ಪುರಾಣ ಅಥವಾ ತ್ರಿಷಷ್ಠಿ ಲಕ್ಷಣ ಮಹಾಪುರಾಣವೆಂಬ ಗ್ರಂಥವನ್ನು ರಚಿಸಿ, ವಿದ್ಯಾಗುರು ಅಜಿತಸೇನ ಭಟ್ಟಾರಕರಿಗೆ ಅದನ್ನು ನಿವೇದಿಸಿದನು.

ಆ ಗ್ರಂಥವನ್ನು ಅನುಮೋದಿಸುತ್ತ ಅಜಿತಸೇನರು “ನೀನು ಆಚಾರ್ಯ ಪರಂಪರೆಯನ್ನು ನಿಷ್ಠೆಯಿಂದ ಅನುಸರಿಸಿದ್ದೀಯೆ. ನಮ್ಮ ಪ್ರಾಚಾರ್ಯರೆಲ್ಲ ದೇವಭಾಷೆಯಲ್ಲಿ ಬರೆದರು. ನೀನು ಪ್ರಪ್ರಥಮವಾಗಿ ಆಡುಭಾಷೆಯಲ್ಲಿ ಬರೆದಿರುವೆ. ಎಲ್ಲಿಯವರೆಗೆ ಈ ಆಡುಭಾಷೆ ಬದುಕುಳಿಯುವುದೋ, ಅರ್ಹತ್ ಧರ್ಮ ಪುಣ್ಯಜೀವಿಗಳ ಮನಸ್ಸನ್ನಾವರಿಸವುದೋ, ಅಲ್ಲಿಯವರೆಗೂ ನಿನ್ನ ಕಾವ್ಯ ಉಳಿಯುವುದೆಂಬ ಭರವಸೆ ನನಗಿದೆ. ನಿನ್ನ ಹೆಸರಿನಿಂದ ಇದನ್ನು ಚಾವುಂಡರಾಯ ಪುರಾಣವೆಂದು ಜನ ಕರೆಯವರು” ಎಂದು ನುಡಿದರು.
ಪೌದನಾಪುರ ತಲುಪುವುದನ್ನು ಗುರಿಯನ್ನಾಗಿರಿಸಿಕೊಂಡು, ನೇಮಿಚಂದ್ರರ ಮಾರ್ಗದರ್ಶನದಲ್ಲಿ ತನ್ನ ತಾಯಿಯೊಂದಿಗೆ ಚಾವುಂಡರಾಯನು ಪ್ರಯಾಣವನ್ನು ಕೈಗೊಂಡನು. ದುರ್ಗಮ ದಾರಿಯನ್ನು ತುಳಿದು, ಪರ್ವತಾರಣ್ಯ ದಾಟಿ, ಚಿಕ್ಕ ಮತ್ತು ದೊಡ್ಡ ಬೆಟ್ಟಗಳಿಂದೊಡಗೂಡಿದ್ದ ರಮ್ಯವಾದ ಕೊಳವೊಂದನ್ನು ಚಾವುಂಡರಾಯನು ತನ್ನವರೊಂದಿಗೆ ತಲುಪಿದನು. ಅಲ್ಲಿಯ ಪ್ರಶಾಂತತೆ ಮತ್ತು ಪರಿಸರದ ಸೌಂದರ್ಯ ಚಾವುಂಡರಾಯನ ಮನಸ್ಸನ್ನು ಸೂರೆಗೊಳ್ಳುವುದು. ಅಲ್ಲಿಯೇ ಕಾಣಿಸುತ್ತಿದ್ದ ಹೆಬ್ಬಂಡೆಯ ಬೆಟ್ಟವಾಗಿ ನಿಂತಿದ್ದ ದೊಡ್ಡಬೆಟ್ಟ ಅವನಿಗೆ ಆದಿನಾಥ ಪ್ರಭುವಿನ ಶುಭ್ರ, ಆಕರ್ಷಕ, ಕೇಶರಹಿತ ಮಸ್ತಕದಂತೆ ಭಾಸವಾಯಿತು.

ಏಕಪಾರ್ಶ್ವನಿಯಮ (ಸಮಾಧಿಯ ಅಂತ್ಯಕ್ಕಿಂತ ಮೊದಲು ಒರಗಿದ ಆಸನ)ದಲ್ಲಿದ್ದ ಮುನಿಯಂತೆ ಚಿಕ್ಕಬೆಟ್ಟವು ಚಾವುಂಡರಾಯನಿಗೆ ಗೋಚರಿಸುತ್ತದೆ. ತೇಲುವ ಮೋಡಗಳನ್ನು ಪ್ರತಿಬಿಂಬಿಸುವ ಸ್ಫಟಿಕದಂತೆ ಶುಭ್ರವಾಗಿದ್ದ ಬಿಳಿ ಕೊಳವೊಂದು ನಿಜವಾದ ದಿಗಂಬರ ಜೈನ ಪರಂಪರೆಯಲ್ಲಿ ದಿಕ್ಕನ್ನೇ ಬಟ್ಟೆಯೆಂಬಂತೆ ಅವನಿಗೆ ಗೋಚರಿಸಿತು
ತಾವೊಂದು ಪವಿತ್ರಸ್ಥಳ ತಲುಪಿರುವುದಾಗಿ ಚಾವುಂಡರಾಯನಿಗೆ ಗುರುಗಳು ತಿಳಿಸುತ್ತಾರೆ. ನೇಮಿಚಂದ್ರರು ಬೆಳ್ಗೊಳ (ಧವಳ ಸರಸ್) ಮತ್ತು ಋಷಿಗಿರಿ, ಅರ್ಥಾತ್ ಕಟವಪ್ರಗಳ ಮಹತ್ವವನ್ನು ವಿವರಿಸಿ, ಕಳ್ವಪ್ಪುವಿನ ಮೇಲೆ ವಿಶ್ರಮಿಸಿಕೊಳ್ಳಲು ಅವರಿಗೆ ಹೇಳುವರು. ಕಳ್ವಪ್ಪುವಿನ ಪಾವಿತ್ರ್ಯತೆಯಿಂದ ಪ್ರಭಾವಿತರಾಗಿ ಮಹಾಸಂತರ ಸ್ಮರಣಾರ್ಥ ಕೆತ್ತಲ್ಪಟ್ಟ ಪಾದಮುದ್ರಿಕೆ ಹಾಗೂ ಶಾಸನಗಳನ್ನು ತುಳಿಯದಂತೆ ಎಚ್ಚರಿಕೆಯಿಂದ ಕಾಲಿಡುತ್ತಾ, ಸಮಾಧಿವ್ರತದಲ್ಲಿ ನಿರತರಾದ ಶ್ರವಣರ ಶಾಂತಿ ಭಂಗವಾಗದಿರಲೆಂದು ಮೆಲ್ಲಗೆ ನಡೆಯುತ್ತ, ಚಾವುಂಡರಾಯ ಮತ್ತು ಅವನ ತಾಯಿ ಒಂದು ಬಂಡೆಗಲ್ಲಿನ ಬಳಿ ಆಶ್ರಯ ಪಡೆದರು. ಬಯಲ ಬಂಡೆಯ ಮೇಲೆ ತಲೆಯಿಟ್ಟು ರಾತ್ರಿ ಕಳೆಯುವರು.
ಅಂದು ರಾತ್ರಿ ಚಾವುಂಡರಾಯನಿಗೊಂದು ವಿಚಿತ್ರ ಕನಸು ಬೀಳುವುದು. ಅದರಲ್ಲಿ ಬಾಹುಬಲಿ ಹಾಗೂ ಭರತರನ್ನೂ ಹಲವು ನೂರು ಮಾರೆತ್ತರದ ಬೃಹತ್ ಮೂರ್ತಿಯ ಉಜ್ವಲ ಸೌಂದರ್ಯವನ್ನೂ ಅವನು ಕಾಣುವನು. ಅವಳ ತಾಯಿ ನೋಡಬಯಸಿದ ಮೂರ್ತಿಯೇ ಅದು ಎಂದು ಅರಿಯುವನು. ಆದರೆ “ಕಲಿಯುಗದಲ್ಲಿ ಅದನ್ನು ತಲುಪಲು ಯಾರಿಂದಲೂ ಸಾಧ್ಯವಿಲ್ಲ. ನಿನ್ನ ಪ್ರಯತ್ನವನ್ನು ಕೈಬಿಡು” ಎಂದು ಯಕ್ಷಿ ಪದ್ಮಾವತಿಯು ಅವನಿಗೆ ಸೂಚನೆ ಕೊಡುವಳು.

ನಿರಾಸೆಯಲ್ಲಿ ಮುಳುಗಿದ ಚಾವುಂಡರಾಯನು ಮಾರ್ಗದರ್ಶನಕ್ಕಾಗಿ ಪ್ರಾರ್ಥನೆ ಮಾಡುವನು. ಆಗ ಪದ್ಮಾವತಿ ಯಕ್ಷಿಯು “ನೀನು ನಿನ್ನ ತಾಯಿಯ ಆಸೆಯನ್ನು ಈಡೇರಿಸಲು ನಾಳೆ ಬೆಳಿಗ್ಗೆ ಎದ್ದೊಡನೆಯೇ ಬೆಟ್ಟದ ತುದಿಯಲ್ಲಿರುವ ಬಂಡೆಗಲ್ಲಿಗೆ ಭಕ್ತಿಯಿಂದ ಬಾಣವನ್ನು ಬಿಡು, ಅಲ್ಲಿ ಬಾಹುಬಲಿ ಉದ್ಭವಿಸಿ ನಿಮಗೆ ದರ್ಶನ ಕೊಡುವನು” ಎಂದು ಆದೇಶವೀಯುವಳು.

ಬೆಳಗಾದೊಡನೆ ಚಾವುಂಡರಾಯನು ತನ್ನ ಸ್ವಪ್ನದ ಬಗ್ಗೆ ಹೇಳಿ, ಗುರುವಿನ ಮಾರ್ಗದರ್ಶನ ಪಡೆದು ತನು ಮನಗಳಲ್ಲಿ ಪರಿಶುದ್ಧನಾಗಿ ಬಿಲ್ಲನ್ನು ಎದೆಗೇರಿಸಿ ಗುರಿಯಿಟ್ಟು ದೊಡ್ಡ ಬೆಟ್ಟದ ಬಂಡೆಯೆಡೆಗೆ ಬಾಣ ಬಿಡುವನು. ಸಾವಿರ ಸಿಡಿಲುಗಳು ಒಮ್ಮೆಲೇ ಅಪ್ಪಳಿಸಿದಂತೆ ಶಬ್ದವಾಗಿ ಬಾಣ ಬಡಿದ ಬಂಡೆಗಲ್ಲು ಸೀಳುವುದು. ನಿರ್ಜೀವ ಬಂಡೆಗಲ್ಲು ಜೀವ ತಳೆದಂತೆ ರೂಪತಾಳುವುದು. ಪರಮಾಶ್ಚರ್ಯ! ಎಲ್ಲಿ ನಿಂತು ನೋಡಿದರೂ ಬಾಹುಬಲಿಯ ಮಸ್ತಕ ಕಣ್ಣುಕುಕ್ಕಿ ಮನವ ತುಂಬಿತು.

ಬಂಡೆಗಲ್ಲನ್ನು ದಾಟುತ್ತ, ತಗ್ಗುಗಳನ್ನು ಹತ್ತಿ ಇಳಿಯುತ್ತ, ಕೊಳಗಳನ್ನು ಬಳಸಿ ಕಂಟೆಗಳನ್ನು ಸರಿಸಿ, ಚಾವುಂಡರಾಯ ದೊಡ್ಡಬೆಟ್ಟವನ್ನು ಏರಿದನು. ನಿಪುಣ ರೂವಾರಿಗಳಿಂದ ಬಂಡೆಗಲ್ಲಿನ ಮಿಕ್ಕ ಭಾಗವನ್ನು ಕೆತ್ತಿಸಿದನು. ಪುತ್ಥಳಿ ದೈವೀ ರೂಪ ಪಡೆಯುವುದು. ಅವನ ಕನಸು ನನಸಾಗುವುದು.
ಷ.ಶೆಟ್ಟರ - ಶ್ರವಣಬೆಳ್ಗೊಳ ಪುಸ್ತಕದಿಂದ

It is not clear as to who inspired and motivated Chavundaraya to get the stately statue of Bahubali created and why Chavundaraya chose Bahubali for creating the statue, instead of many Tirthankaras.
However, there is no question of denying the fact that Chavundaraya was certainly inspired by some mystic power to take up the creation of a gigantic monolithic statue of Gommateshwara. Even though Chavundaraya had authored a book titled Chavundaraya Purana or Trishashthi Lakshana Purana much before getting the statue of Bahubali created, there is no mention of this statue in his work. The literary works and inscriptions that came later throw light on this story.
Once Chavundaraya had invited a poet to the royal session and he narrated the story of Adinatha and his sons Bharata and Bahubali in a very convincing and inspiring way. Meanwhile, Kalaladevi, the mother of Chavundaraya, listened to a spiritual discourse about Bharata having created a giant statue of Bahubali in a place called Paudanapur. She was so impressed by the story that she developed a yearning to see that statue and vouched not to consume any food till seeing that statue.
Chavundaraya did not know how to fulfill the desire of his mother. Although he was an expert in warfare, he had no clue about finding the inaccessible Paudanapur, where the monolithic statue of Bahubali was stated to have been installed by Bharata. When he consulted his Guru Nemichandra for guidance, the latter said: “Paudanapur can only be found with full conviction, dedication, devotion and interest.” Chavundaraya purified his mind by performing Triratnas and Panchanamaskaras (five types of salutations). He prepared for the new expedition by sanctifying himself with Anuvrats. By going through the anecdotes and biographies of Tirthankaras, he enhanced his knowledge and authored his Trishashashthi Lakshana Purana or Chavundaraya Purana. He submitted his exemplary work to his Guru Ajitsen Bhattarak, who approved the work and said: “You have deftly followed the tradition of the Acharyas with dedication. All our predecessors had written in the divine language and you have used colloquial diction. I am confident that your work will adorn the minds of spirituous people till as long as the colloquial language exists in the world. This work will henceforth be referred to as Chavundaraya Purana.”
Chavundaraya undertook the journey towards Paudanapur under the guidance of his Master Nemichandra and along with his mother Kalaladevi. Treading the impermeable tracks, crossing the mountains and forests, he ultimately reached an enthralling, attractive and serene pond that was surrounded by tiny and large hillocks. The tranquility of the place and the scenic beauty of the atmosphere mesmerized Chavundaraya. It appeared to him that a giant rock atop a hill at a long distance from the place where he was staying was but the hairless forehead of sublime, inspiring, attractive and stately form of Adinatha Swamy. The nearby small hillock appeared like a sage standing in a posture that could be attained by following the Yekaparshwa principle (a lenient state prior to the Samadhi state). A pond with sky-like pure and white water appeared to Chavundaraya like a Jain Digambar, who considers the blue sepulcher as the cloth to cover his mien.
The Master told his disciple Chavundaraya that they had reached a sacred place indeed. Describing the Belgola (Dhaval Sarovar) and the significance of Rishigiri, meaning Katavappa, the Master asked Chavundaraya and his mother to rest in that place. Putting careful steps at a slow pace so that the peace and serenity of Shravana who might be around was not disturbed, Chavundaraya and his mother took shelter near a huge rock. Laying their heads on that rock, they spent the night there.
On that night, Chavundaraya had a dream in which he saw Bahuhali, Bharata and a beautiful, attractive, radiant and a very tall statue. He immediately perceived that the statue was the same as his mother was longing to see. But, Yakshi Padmavati, who also appeared in the dream, tells him: “None can reach that statue in Kaliyuga. Shun your desire to see it.”
Drowned in disappointment and dejection, Chavundaraya appeals for a way out. Yakshi Padmavati tells him again: “To fulfill the desire of your mother, fire an arrow as soon as you wake up in the morning at the rock that exists at the tip of that hillock. Bahubali will manifest there and gives his divine Darshan to you.”
As soon as the day broke out, Chavundaraya narrated the dream to his Master. As advised by the Master, he set an arrow on the string of his bow with a pure mind and hit the rock with all his might. Instantaneously, a lightning sound emanates from the rock, which broke into two halves, even as the bright, shining and glowing forehead of Bahubali pierced his eyes. His heart was brimming with mirth.
Crossing the rocks, passing through the ups and downs that lay in front of him, clearing herbs and shrubs on the way, Chavundaraya climbed the hillock. Hiring expert sculptors, he got the statue of Bahubali carved from the rock. It was a dream come true for Chavundaraya.

Source : S. Shettar (Shravanabelagola Book)

गोम्मट सृष्टि की कहानी

विराट्मूर्ति को बनाने में चावुंडराय कैसे प्रेरित हुआ,उस की कल्पना कैसे की और तीर्थंकरों में से किसी एक को छोडकर बाहुबलि को क्यों चुना, यह हमे मालूम नहीं l लेकिन इस बात का इनकार नहीं कर सकते कि बडी प्रेरणा से ही उस ने यह काम पूरा किया I वरन इन परिस्थितियों को समझानेवाले कोई प्रलेख नहीं मिलते l और न ही चावुंडराय अपनी साहित्य कृति ‘त्रिषष्टि सलाक पुरुष चरित’ में उस का उल्लेख करता, हालाकि वह विराट्मूर्ति की रचना से पहले आयी थी l तथापि चावुंडराय के काल के बाद की कही साहित्य-कृतियाँ और दंतकथा के अनुसार चावुंडराय ने एक बार एक कवि को अपने राजसभा में आमंत्रित किया जिस ने आदिनाथ तथा उन के दो बेटें भरत तथा बाहुबलि की बडी कहानी सुनायी l

चावुंडराय की माँ काळलादेवि उस से३ इतनी प्रभावित हो गयी कि उसी रात उस ने भरत से पौदनपुर में बनवायी गयी विराट्मूर्ति का सपना देखा और उस के दर्शन के बिना पौष्टिक आहार नहीं छूने का शपथ लिया l चावुंडराय उलझन में पडा कि माँ की इच्छा को पूरा कैसे किया जाय l वह तो योद्धा थाऔर लडाई करना जरूर जानता था, लेकिन यह न जानता था कि अगम्य पौदनपुर कैसे पहुँचे l उस ने अपने गुरु नेमिचंद्र सिद्धांत देव का मार्गदर्शन चाहा जिसने उसे बताया कि सिर्फ़ भक्ति तथा श्रद्धा से पौदनपुर पहुँचा जा सकता है l उस संत ने चावुंडराय को उपदेश दिय कि त्रिरत्नों के पालन करके पंचनमस्कार से मन को परिशुद्ध बना के अणुव्रतों से दृढ्बन के इस नयी किस्म के अभियान की तैयारी करनीचाहिये l चावुंडराय तीर्थंकरों की जीवनियों को पडकर ज्ञान संपन्न होता है और ‘त्रिषष्टि सलाक पुरुषचरिते’ लिख कर अपने विद्यागुरु अजितसेन भटारक को उसे पेश करता है l

उसे पसंद करते हुये अजितसेन ने कह, “ तुम ने आचार्यों से प्रारंभ की गयी परंपरा का अनुसरण निष्ठा से किया है l हमारे बडे आचार्यों ने देवभाषा में लिखा l तुम ने पहलेपहल मानव की भाषा में लिखा है l मुझे यकीन है कि जब तक भाषा टिकेगी और अर्हत-धर्म पुण्य लोगो के मन पर काबू रखता तुम्हारी कृति रहेगी l यह तुम्हारे नाम से ‘चावुंडरायपुराण’ कहला जा सकती है l ”

पौदन्पुर को अपना लक्ष्य बनाकर ,नेमिचंद्र को मार्गदर्शक बनाकर, चावुंडराय अपनी मा के साथ निकलता l कठिन मार्ग जंगल तथा पर्वतों से होकर वे छोटे तथा बडे पहाड्से छायी हुई तंग घाटीपहुंचते l चावुंडराय इस जगह के प्रशांत सौंदर्य से आकर्षित होता l उसे बडागोलाश्मवाला बडा पहाड, आदिनाथ स्वामी का स्वच्छ, आकर्षक बेऐब तथा सुडौल बेबाल मस्तक जैसे लगता l छोटा पहाड एक्पार्श्वनियम में (समाधि के अम्त के पूर्व की लेटी मुद्रा) रहनेवाला मुनी जैसे दिखता l घाटी की स्फाटक जैसे स्वच्छ पानीवाली तथा उस की शांत सतह पे प्रतिबिंबित होनेवाले सफेद ,मंडराते बादलवाली तलैया मानों असली दिगंबर परंपरा में दिक (दिशा) से सजायी हुई लगती l

चावुंडराय को गुरु ने बताया कि वह पवित्र जगह पहुंचा है l नेमिचंद्र बेळगोळ (धवळ-सरस) तथा ऋषिगिरि याने कटवप्र का महत्व समझाते और कळबप्पु पर विश्राम करने का उपदेश देते l कळबप्पु को पवित्रता से आकर्षित होकर ,सावधानी से चलते ताकि पद-चिह्नों तथा बडे संतों की खातिर उकेरे गये शिलालेखों पर पाँव न रखें किसी आवाज न करते ताकि कहीं समाधि व्रत में निरत श्रमणों की शांति भंग न हो चावुंडराय और उस की माँ ने इक गोलश्म को चुन लिया और शिलासंस्तर की नंगी सतह पे सिर रख के लेटते l

उस रात चावुंडराय ने इक अजीब सपना देखा l उस में बाहुबलि तथा भारत का सारा जीवन और विराट्मूर्ति का जो कई सौ बित्ते ऊचीं है, उज्ज्वल सौंदर्य नजरों के सामने आता l वह वही मूर्ति है जिसे उस की माँ देखना चाहती थी l मगर यखी पद्मावती उसे चतावनी देती है कि “ कलियुग में उसे कोई नहीं पहुँचेगा l तुम उस की कोशिश न करना l”

चावुंडराय निराशा में डूब जाता और मार्गदर्शन के लिये प्रार्थना करता l तब यक्षी उसे बताती है कि वह अपनी माँ की आकांक्षा कल सुबह उस पवित्र केंद्र में जहां उन्होने रात बितायी थी पूरा करेगा l कल सुबह बडे पहाड की चोटी पे रहनेवाला गोलाश्म पे तीर चलाने का उपदेश देती l

सुबह होतेही चावुंडराय अपनी माँ से सपने के बारे में सब बताता और गुरु का मार्गदर्शन चाहता l तन तथा मन में परिशुद्ध होकर वह अपने धनुष ले कर निशान पे तीर चलाता l हजार वज्रपात हेते हैं, तीर गोलाश्म को लगता और छिलके उडाता l निर्जीव चटान आकार (रूप) लेता l कैसा ताज्जुब है ! वह जहाँ खडा है वहां से बाहुबलि का मस्तक नजर आता l

पत्थरों को टालते, दरों को तथा तलैयों को पार करते , झाडियों को हटाते चावुंडराय बडे पहाड्पे चढता l और निपुण रुवारियों से बाकी गोलाश्म्को उकिरवाता है l मूर्ति का रूप दैवी बनता l सपना हकीकत बनता l

ष.शेट्टर - श्रवणबेळ्गोळ किताब से


For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka 2018-Official App.
Visit our website : www.mahamastakabhisheka2018.com
Follow us on Facebook : facebook.com/2018mastakabhisheka/ Daily updates on Mahamastakabhisheka2018, Bahubali, Kalashabooking, Lord Gommateshwara, Sharvanabelagola, Hassan.

ಸಲ್ಲೇಖನ ವ್ರತ / Sallekhana Vrat

“ಸಲ್ಲೇಖನ” ಎಂಬುದು ಜೈನ ಧರ್ಮೀಯರ ಒಂದು ಕಠಿಣ ವ್ರತ. ಜೈನಧರ್ಮದ ಅನುಸಾರವಾಗಿ ಪ್ರತೀಕಾರವಿಲ್ಲದ ಉಪಸರ್ಗವಾಗಲೀ, ವೃದ್ಧಾಪ್ಯವಾಗಲಿ ಅಥವಾ ರೋಗವಾಗಲೀ ಬಂದೊದಗಿದ್ದಲ್ಲಿ, ಮೋಕ್ಷ ಅಥವಾ ಸದ್ಗತಿಗಾಗಿ ಧರ್ಮಪೂರ್ವಕವಾಗಿ ಶರೀರ ತ್ಯಾಗಮಾಡುವ ವಿಧಿಗೆ ಸಲ್ಲೇಖನ ವ್ರತ ಎನ್ನಲಾಗುತ್ತದೆ. ಇಂಥ ಮರಣವನ್ನು ಸಲ್ಲೇಖನ, ಸಮಾಧಿ, ಸನ್ಯಸನ, ಇಂಗಿಣಿ, ಆರಾಧನ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಈ ಎಲ್ಲಾ ಮರಣಗಳ ವಿಧಿ ವಿಧಾನಗಳು ಮೇಲ್ನೋಟಕ್ಕೆ ಒಂದೇ ಅದರೂ, ಪ್ರತಿಯೊಂದು ಮರಣವೂ ತನ್ನದೇ ಆದ ಅರ್ಥ ವ್ಯಾಪ್ತಿಯನ್ನು ಹೊಂದಿದೆ. ಸಲ್ಲೇಖನ ವ್ರತ ಸ್ವೀಕರಿಸಿದವರು ಅನ್ನ-ನೀರು ತ್ಯಜಿಸಿ ಎಲ್ಲ ರೀತಿಯ ವೈರ ಸಂಗಗಳನ್ನು ತೊರೆದು ತನ್ನ ಕರ್ಮಗಳನ್ನು ಕುರಿತು ಯೋಚಿಸಿ ಪಶ್ಚಾತಾಪಪಡುತ್ತ ಪಂಚಪರಮೇಷ್ಟಿಗಳನ್ನು ಧ್ಯಾನಿಸುತ್ತಾ ತನಗೆ ಉತ್ತಮ ಮೋಕ್ಷ ದೊರೆಯಲೆಂದು ಹಾರೈಸುತ್ತಾ ದೇಹತ್ಯಾಗ ಮಾಡುತ್ತಾರೆ. ಸಲ್ಲೇಖನ ವ್ರತವು ಗೃಹಸ್ಥನ ನೈಮಿತ್ತಿಕ ಕ್ರಿಯೆಯಾಗಿದೆ. ಗೃಹಸ್ಥನು ಜೀವನದಲ್ಲಿ ಅದುವರೆಗೆ ಅಭ್ಯಸಿಸಿದ ಶ್ರಾವಕೀಯ ಆಚಾರಗಳ ಅಂತಿಮ ಪರೀಕ್ಷೆಯೇ ಸಲ್ಲೇಖನ ವ್ರತ. ಜೈನ ಪುರಾಣದಲ್ಲಿ ಸಲ್ಲೇಖನ ವ್ರತದ ಬಗ್ಗೆ ಪ್ರಸ್ತಾಪಿಸಲ್ಪಟ್ಟಿದೆ. ಮೊದಲ ಜೈನ ತೀರ್ಥಂಕರ ಆದಿದೇವ, ಅತ್ತಿಮಬ್ಬೆ, ವಡ್ಡಾರಾಧನೆಯಲ್ಲಿ ಬರುವ ಕೆಲವು ಪಾತ್ರಗಳು ಸಲ್ಲೇಖನ ವ್ರತದ ಮೂಲಕ ದೇಹತ್ಯಾಗ ಮಾಡಿದ್ದಾರೆ ಎನ್ನಲಾಗಿದೆ. ಚರಿತ್ರೆಯಲ್ಲಿ ಹೊಯ್ಸಳ ರಾಣಿ ಶಾಂತಲೆ ಸಲ್ಲೇಖನ ವ್ರತದ ಮೂಲಕ ದೇಹತ್ಯಾಗ ಮಾಡಿದ್ದಳು ಎನ್ನಲಾಗಿದೆ.

“Sallekhana” is a very tough and arduous Vrat prescribed for followers of Jainism. Sallekhana Vrat can be defined as a process of getting rid of the corporal body in the sane and reverent manner for salvation or securing a sacred world hereafter at such a period of life when a portent misfortune, old age or incurable disease grips a person. The death attained in this way is called Sallekhana Vrat, which is also called as Samadhi, Sanyasana, Ingini and Aradhana. Although the death summoned through these processes seem to be the same from an overview, each of them has a subtle difference compared to the other and they have distinct, independent and separate scope and meaning. Persons undertaking Sallekhana Vrat sacrifice or refrain from consuming food and water, abstain from the company of foes, think about their deeds, regret for their misdeeds, meditate Panchaparameshti and sacrifice the body with the sole desire of attaining salvation. Sallekhana Vrat is a daily routine for every Gruhastha or family person. It is the final test of all sane or insane actions and reactions (Shravakeeya Acharas) that a person or Gruhastha follows from birth to death. Sallekhana Vrat finds mention in the Jain Purana. First Jain Tirthankara Adideva, Attimabbe and a few pesons mentioned in Vaddaradhana are said to have ridden their corporal body through Sallekhana Vrat. Historically, it is said that Hoysala queen Shantala ended her life through Sallekhana Vrat.

For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka 2018-Official App. Visit our website : www.mahamastakabhisheka2018.com
Follow us on Facebook : facebook.com/2018mastakabhisheka/ Daily updates on Mahamastakabhisheka2018, Bahubali, Kalashabooking, Lord Gommateshwara, Sharvanabelagola, Hassan.

ಮಹಾಮಸ್ತಕಾಭಿಷೇಕ ನಡೆದು ಬಂದ ಹಾದಿ / History of Mahamastakabhisheka (Shravanabelagola Mahamastakabhisheka 2018)

ಶ್ರವಣಬೆಳ್ಗೊಳದಲ್ಲಿರುವ ಮೇರುಮೂರ್ತಿ ಶ್ರೀ ಗೊಮ್ಮಟೇಶ್ವರನಿಗೆ ಸಾಂಪ್ರದಾಯಿಕವಾಗಿ ಅಭಿಷೇಕ ಮಾಡುವುದನ್ನು ಮಹಾಮಸ್ತಕಾಭಿಷೇಕವೆಂದು ಕರೆಯಲಾಗುತ್ತದೆ. ಈ ವೈಭವೋಪೇತ ಅಭಿಷೇಕವು ಹನ್ನೆರಡು ವರ್ಷಗಳಿಗೊಮ್ಮೆ ಸಂಪನ್ನವಾಗುವುದು. ಆದ್ದರಿಂದ ಜಗದಾದ್ಯಂತ ಜೈನ ಸಂಪ್ರದಾಯಸ್ಥರಿಗೆ ಮಹಾಮಸ್ತಕಾಭಿಷೇಕವು ಅತ್ಯಂತ ಪವಿತ್ರವಾದ, ಪುಣ್ಯಕರವಾದ ಮತ್ತು ಪ್ರಮುಖವಾದ ಆಚರಣೆಯಾಗಿದೆ. ಐತಿಹಾಸಿಕ ದಾಖಲೆಗಳ ಪ್ರಕಾರ ಪ್ರಥಮ ಮಹಾಮಸ್ತಕಾಭಿಷೇಕವು ಕ್ರಿ.ಶ. 981ರಲ್ಲಿ ನಡೆಯಿತು. ಶ್ರವಣಬೆಳ್ಗೊಳದ ಬೃಹತ್ ಗೊಮ್ಮಟನ ವಿಗ್ರಹವನ್ನು ಗಂಗ ರಾಜರ ಸೇನಾಧಿಪತಿ ಹಾಗೂ ಮಂತ್ರಿಯಾಗಿದ್ದ ಚಾವುಂಡರಾಯನು ಕ್ರಿ.ಶ. 981-982ರಲ್ಲಿ ಸ್ಥಾಪಿಸಿದನೆಂದು ತಿಳಿದುಬರುತ್ತದೆ. ಈ ಉತ್ಸವವನ್ನು ವೀಕ್ಷಿಸಲು ಜಗತ್ತಿನ ಮೂಲೆ-ಮೂಲೆಗಳಿಂದ ಅನೇಕಾನೇಕ ಜೈನ ಮುನಿಗಳು, ಆಚಾರ್ಯರು, ಆರ್ಯಿಕೆಯರು, ಭಟ್ಟಾರಕರೇ ಮೊದಲಾದವರು ಬರುತ್ತಾರೆ. ಮಹಾಮಸ್ತಕಾಭಿಷೇಕವು ಆರಂಭವಾಗುತ್ತಿದ್ದಂತೆ ನೆರೆದಿರುವ ಜನಸ್ತೋಮದ ಮೇಲೆ ಭಕ್ತಾದಿಗಳು 1008 ಕಲಶಗಳಲ್ಲಿರುವ ಪವಿತ್ರ ತೀರ್ಥೋದಕವನ್ನು ಸಿಂಪಡಿಸುತ್ತಾರೆ. ನಂತರ 58.8 ಅಡಿ ಎತ್ತರದ ಶ್ರೀ ಗೊಮ್ಮಟೇಶ್ವರನಿಗೆ ಇಕ್ಷುಕರಸ, ಹಾಲು, ಶ್ವೇತಕಲ್ಕ ಚೂರ್ಣ, ಹರಿದ್ರಾಕಲ್ಕ ಚೂರ್ಣ, ಕಷಾಯ, ಪ್ರಥಮ ಕೋನ ಕಲಶ, ದ್ವಿತೀಯ ಕೋನ ಕಲಶ, ತೃತೀಯ ಕೋನ ಕಲಶ, ಚತುರ್ಥ ಕೋನ ಕಲಶ, ಶ್ರೀಗಂಧ, ಚಂದನ, ಅಷ್ಟಗಂಧ ಮುಂತಾದ ತೀರ್ಥಗಳಿಂದ ಅಭಿಷೇಕವನ್ನು ನೆರವೇರಿಸುತ್ತಾರೆ. ಇದೇ ಸಾಲಿನ ಫೆಬ್ರುವರಿಯಲ್ಲಿ ನಡೆಯುವ ಮಹಾಮಸ್ತಕಾಭಿಷೇಕವು ಇಪ್ಪತ್ತೊಂದನೇ ಶತಮಾನದ ಎರಡನೇ ಉತ್ಸವವಾಗಿರುತ್ತದೆ. ಈ ಹಿಂದೆ, ಮಹಾಮಸ್ತಕಾಭಿಷೇಕವು 2006ನೇ ಇಸವಿಯಲ್ಲಿ ಸಂಪನ್ನಗೊಂಡಿತ್ತು. ಈ ಬಾರಿ ಶ್ರವಣಬೆಳ್ಗೊಳಕ್ಕೆ ಹರಿದುಬರುವ ಲಕ್ಷಾಂತರ ಜನರನ್ನು ಗಮನದಲ್ಲಿಟ್ಟುಕೊಂಡು ಅಭೂತಪೂರ್ವ ತಯಾರಿಯನ್ನು ಮಾಡಲಾಗಿದೆ.

Mahamastakabhisheka or the grand anointment of Lord Gommateshwara at Shravanabelagola is a very important festival for Jains. According to historical evidences, the maiden Mahamastakabhisheka took place in 981 A.D. The spectacular Mahamastakabhisheka is in veneration of the 58.8 ft. high monolithic statue of Gommateshwara, which is said to have been created by Chavundaraya, who was the Chief Commander and Minister of Ganga Kings. A large number of Jain Acharyas, Munis, Aryikas, Bhattaraks and monks from across the country come to witness the most colorful event. As the Mahamastakabhisheka begins, consecrated water is sprinkled on the participants by devotees carrying 1,008 specially prepared vessels called Kalashas. The statue is then bathed and anointed with libations such as milk, sugarcane juice, saffron paste, Kashaya, water mixed with turmeric, sandalwood and vermillion. The February 2018 Mahamastakabhisheka is the second such festival of the 21st Century as the previous one was held in 2006. A lot of preparations have gone in for the forthcoming extravaganza as basic facilities have been created for the lakhs and lakhs of people coming to see this world renowned spectacle.

For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka 2018-Official App. Visit our website : www.mahamastakabhisheka2018.com Follow us on Facebook : facebook.com/2018mastakabhisheka/ Daily updates on Mahamastakabhisheka2018, Bahubali, Kalashabooking, Lord Gommateshwara, Sharvanabelagola, Hassan.